Wednesday, June 3, 2026
Homeಕರಾವಳಿಉಡುಪಿಹೈಕೋರ್ಟ್ ತೀರ್ಪು ವಿರೋಧಿಸಿ ಭಟ್ಕಳದಲ್ಲಿ ಮುಸ್ಲಿಂ ವರ್ತಕರ ಅಂಗಡಿ ಬಂದ್

ಹೈಕೋರ್ಟ್ ತೀರ್ಪು ವಿರೋಧಿಸಿ ಭಟ್ಕಳದಲ್ಲಿ ಮುಸ್ಲಿಂ ವರ್ತಕರ ಅಂಗಡಿ ಬಂದ್

- Advertisement -
- Advertisement -

ಕಾರವಾರ: ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸ್ವಯಂ ಘೋಷಿತ ಅಂಗಡಿ ಮುಂಗಟ್ಟುಗಳ ಬಂದ್ ನಡೆದಿದೆ. ಕೆಲವು ಮುಸ್ಲಿಂ ವರ್ತಕರಿಂದ ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್ ನಡೆಸಲ್ಪಟ್ಟಿದೆ. ಭಟ್ಕಳ ನಗರದ ಪ್ರಮುಖ ರಸ್ತೆಯಲ್ಲಿರುವ ಮುಸ್ಲಿಂ ವರ್ತಕರ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.

ಹಳೆ ಬಸ್ ನಿಲ್ದಾಣದಿಂದ ಚೌಕ್ ಬಜಾರ್ ವರೆಗೆ ಇರುವ ಬಹುತೇಕ ಮುಸ್ಲಿಂ ವರ್ತಕರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಹೈಕೋರ್ಟ್ ತೀರ್ಪು ಸಮಾಧಾನ ಇಲ್ಲ‌ ಎಂಬ‌ ಕಾರಣಕ್ಕೆ ಅಂಗಡಿ ಬಂದ್ ನಡೆಸಲಾಗಿತ್ತು.

- Advertisement -

Latest News

error: Content is protected !!