Thursday, June 25, 2026
Homeಕರಾವಳಿಉಡುಪಿಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ವಿರೋಧ:  ಉಡುಪಿಯಲ್ಲಿ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿ

ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ವಿರೋಧ:  ಉಡುಪಿಯಲ್ಲಿ ವಿದ್ಯಾರ್ಥಿನಿಯರ ಸುದ್ದಿಗೋಷ್ಠಿ

- Advertisement -
- Advertisement -

ಉಡುಪಿ: ಇಂದು ಹಿಜಾಬ್ ಕುರಿತು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದರ ಬೆನ್ನಲ್ಲೇ ಹಿಜಾಬ್ ವಿವಾದಕ್ಕೆ ಮುನ್ನುಡಿ ಬರೆದ ಉಡುಪಿಯ ವಿದ್ಯಾರ್ಥಿನಿಯರು ತೀರ್ಪನ್ನು ವಿರೋಧಿಸಿ ಸುದ್ದಿಗೋಷ್ಠಿ ನಡೆಸಿದ್ರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯರು ಹೈಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತದೆ. ನಮ್ಮ ಹಕ್ಕುಗಳಿಗೆ ಮಾನ್ಯತೆ ಸಿಗುತ್ತದೆ ಎಂದು ನಂಬಿದ್ದೆವು. ಆದರೆ ನಮ್ಮ ವಿರೋಧವಾಗಿ ತೀರ್ಪು ಬಂದಿದೆ. ತೀರ್ಪಿನಲ್ಲಿ ನಮ್ಮ ಹಕ್ಕುಗಳಿಗೆ ಬೆಲೆ ಸಿಗಲಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ ಎಂದಿದ್ದಾರೆ. ಹಿಜಾಬ್ ವಿಚಾರವನ್ನು ರಾಜಕೀಯ ಲಾಭಕ್ಕೆ ಕಮ್ಯೂನಲ್ ಮಾಡಲಾಗಿದೆ. ರಾಜಕೀಯ ದುರುದ್ದೇಶದಿಂದ ದೊಡ್ಡ ವಿಷಯವಾಗಿ ಮಾಡಿದರು. ಎಲ್ಲರ ಶಿಕ್ಷಣಕ್ಕೆ ಬಹಳ ಸಮಸ್ಯೆ ಆಗಿದೆ. ನಮಗೆ ಧರ್ಮ ಮತ್ತು ಶಿಕ್ಷಣ ಬಹಳ ಮುಖ್ಯ. ನಮಗೆ ಎರಡೂ ಅವಕಾಶ ಬೇಕು ಎಂದಿದ್ದಾರೆ.

- Advertisement -

Latest News

error: Content is protected !!