Wednesday, June 24, 2026
Homeಕರಾವಳಿಉಡುಪಿಹಿಜಾಬ್ ತೀರ್ಪು ವಿರೋಧಿಸಿ ಇಂದು ಭಟ್ಕಳದಲ್ಲಿ ಮುಸ್ಲಿಂ ವರ್ತಕರಿಂದ ಅಂಗಡಿ ಬಂದ್

ಹಿಜಾಬ್ ತೀರ್ಪು ವಿರೋಧಿಸಿ ಇಂದು ಭಟ್ಕಳದಲ್ಲಿ ಮುಸ್ಲಿಂ ವರ್ತಕರಿಂದ ಅಂಗಡಿ ಬಂದ್

- Advertisement -
- Advertisement -

ಕಾರವಾರ: ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ತಂಜಿಮ್ ಸಂಘಟನೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಮಾಡಿದ ಮನವಿಗೆ ಮುಸ್ಲಿಂ ವರ್ತಕರಿಂದ ಬೆಂಬಲ ವ್ಯಕ್ತವಾಗಿದೆ.

ಭಟ್ಕಳ ನಗರದ ಮುಖ್ಯರಸ್ತೆ ಸೇರಿದಂತೆ ಹಲವು ಭಾಗದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ

ಬೊಂಬಾಯ್ ಬಜಾರ್ ರೋಡ್, ಮೌಲಾನಾ ಆಜಾದ್ ರೋಡ್, ಮಾರಿಕಟ್ಟೆ ರಸ್ತೆ ಸೇರಿದಂತೆ ಮುಖ್ಯ ವಾಣಿಜ್ಯ ವ್ಯವಹಾರದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲ್ಪಟ್ಟಿವೆ.

ಹಿಜಾಬ್ ಕುರಿತಂತೆ ಹೈ ಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟು ಬಂದ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ಬಂದ್ ಮಾಡುವಂತೆ ನಿನ್ನೆ ಭಟ್ಕಳದ ಮಜ್ಲಿಸ್ಲೆ‌ ಇಸ್ಲಾಹೋ ತಂಜೀಮ್ ಸಂಘಟನೆ ಮನವಿ ಮಾಡಿತ್ತು.‌

- Advertisement -

Latest News

error: Content is protected !!