Wednesday, June 3, 2026
Homeತಾಜಾ ಸುದ್ದಿಹೊಸಪೇಟೆ:ಲಾರಿಯಲ್ಲಿ ಮಲಗಿದ್ದ ಚಾಲಕನ ಕೊಲೆ- ತಲೆಗೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!..

ಹೊಸಪೇಟೆ:ಲಾರಿಯಲ್ಲಿ ಮಲಗಿದ್ದ ಚಾಲಕನ ಕೊಲೆ- ತಲೆಗೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!..

- Advertisement -
- Advertisement -

ಹೊಸಪೇಟೆ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಲಾರಿಯಲ್ಲಿ ಮಲಗಿದ್ದ ಚಾಲಕನ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ ಮಾಡಲಾಗಿದೆ. ವಾರದ ಅಂತರದೊಳಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಇದು ಎರಡನೇ ಕೊಲೆಯಾಗಿದೆ. ಚಿದಾನಂದ(40) ಎಂಬುವರ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿದ್ದು ಇವರು ಎಪಿಎಂಸಿಯಲ್ಲಿ ಲೋಡ್‌ ಇಳಿಸಿ, ರಾತ್ರಿ ಅಲ್ಲಿಯೇ ಮಲಗಿದ್ದಾರೆ.

ತಡರಾತ್ರಿ 3ರಿಂದ 4 ಗಂಟೆಯ ನಡುವೆ ಕೊಲೆ ನಡೆದಿದೆ ಎನ್ನಲಾಗಿದೆ.ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ.

- Advertisement -

Latest News

error: Content is protected !!