Thursday, June 4, 2026
Homeತಾಜಾ ಸುದ್ದಿಪ್ರೀತಿ ಬೇಕು ಮದುವೆ ಬೇಡ ಎಂದ ಯುವಕ- ಪೋಲೀಸರ ಸಮ್ಮುಖದಲ್ಲಿ ವಿವಾಹ!..

ಪ್ರೀತಿ ಬೇಕು ಮದುವೆ ಬೇಡ ಎಂದ ಯುವಕ- ಪೋಲೀಸರ ಸಮ್ಮುಖದಲ್ಲಿ ವಿವಾಹ!..

- Advertisement -
- Advertisement -

ಬರಗೂರು:ಇಲ್ಲಿನ ಬರಗೂರಿನ ಲಕ್ಷ್ಮೀ ದೇವಸ್ಥಾನದಲ್ಲಿ ವಿವಾಹವೊಂದು ಪೋಲೀಸರ ಸಮ್ಮುಖದಲ್ಲಿ ನೆರವೇರಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಯುವಕನಿಗೆ ಪೊಲೀಸರು ಗ್ರಾಮಸ್ಥರ ಸಮ್ಮುಖದಲ್ಲಿ ತಾಳಿಕಟ್ಟಿಸಿದ್ದಾರೆ.

ಶಿರಾ ತಾಲೂಕಿನ ಬರಗೂರಿನಲ್ಲಿ ಕೂಲಿ ಕೆಲಸಗಾರರಿಗೆ ಅಡಿಗೆ ಮಾಡಲು ಬಂದಿದ್ದ ದಾವಣಗೆರೆ ಜಿಲ್ಲೆಯ ದಾಸನಕೊಪ್ಪ ಗ್ರಾಮದ ಯುವಕ ರಾಜು ಎಂಬುವನು ಅದೇ ಜಿಲ್ಲೆಯ ಕಲಗಟಕಿ ಗ್ರಾಮದ ಯುವತಿ ಶಿಲ್ಪಾ ಎಂಬುವಳನ್ನು ಪ್ರೀತಿಸಿ ಆಕೆಯೊಡನೆ ಮದುವೆಯಾಗುವುದಿಲ್ಲ ಎಂದಿದ್ದಾನೆ.ಆದರೆ ಪೊಲೀಸರು ಮಧ್ಯ ಪ್ರವೇಶಿಸಿ ಯುವಕ- ಯುವಿತಿ ತಂದೆ ತಾಯಿಯ ಒಪ್ಪಿಗೆ ಮೇರೆಗೆ ಪೋಲೀಸರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ನಡೆಸಿದ್ದಾರೆ.

- Advertisement -

Latest News

error: Content is protected !!