Monday, July 13, 2026
Homeಕರಾವಳಿಬೆಳ್ತಂಗಡಿ: ಯುವಕನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ, ಸ್ಥಿತಿ ಗಂಭೀರ

ಬೆಳ್ತಂಗಡಿ: ಯುವಕನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ, ಸ್ಥಿತಿ ಗಂಭೀರ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆಯ ಸುಧೀರ್ (26) ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ದಿಡುಪೆ ಮೈರ್ನೋಡಿ ಮನೆಯ ಚನನ ಗೌಡ ಮತ್ತು ಅವರ ಮಗನಾದ ದಿನೇಶ್ ಗೌಡ, ಉಮೇಶ್ ಗೌಡ ಇವರು ಮೂವರುಗಳು ಸೇರಿ ಸುಧೀರನ್ನು ಅಡ್ಡಗಟ್ಡಿ ರಾಡ್, ಕಲ್ಲು ಮತ್ತಿತರ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹಲ್ಲೆ ಮಾಡಿದ ಉಮೇಶ್ ಗೌಡ ಮತ್ತು ದಿನೇಶ್ ಗೌಡ

ಗಾಯಗೊಂಡ ಸುಧೀರ್ ನನ್ನು ಸ್ಥಳೀಯ ಯವಕರು ಸೇರಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಧೀರ್ ಇಂದು ರಾತ್ರಿ ತನ್ನ ಮನೆಯಿಂದ ಮೆಹಂದಿ ಕಾರ್ಯಕ್ರಮಕ್ಕೆ ದಾರಿಯಲ್ಲಿ ಹೋಗುತ್ತಿದ್ದಾಗ ಮೂವರು ಸೇರಿ ಏಕಾಏಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ, ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

- Advertisement -

Latest News

error: Content is protected !!