Thursday, June 4, 2026
Homeಕರಾವಳಿಉಡುಪಿಮಲ್ಪೆ: ನಡುರಸ್ತೆಯಲ್ಲೇ ಮೀನುಗಾರ ಯುವಕನನ್ನು ಇರಿದು ಕೊಲೆ, ಆರೋಪಿಗಳು ಪರಾರಿ

ಮಲ್ಪೆ: ನಡುರಸ್ತೆಯಲ್ಲೇ ಮೀನುಗಾರ ಯುವಕನನ್ನು ಇರಿದು ಕೊಲೆ, ಆರೋಪಿಗಳು ಪರಾರಿ

- Advertisement -
- Advertisement -

ಮಲ್ಪೆ: ಸಮೀಪದ ತೆಂಕನಿಡಿಯೂರಿನ ಲಕ್ಷ್ಮೀ ನಗರದಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮೀನುಗಾರ ಯುವಕನನ್ನು ಕ್ಷುಲ್ಲಕ ಕಾರಣಕ್ಕಾಗಿ ರಸ್ತೆಯಲ್ಲಿ ಅಡ್ಡಹಾಕಿ ಚೂರಿಯಿಂದ ಇರಿದು ಕೊಲೆಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಲಕ್ಷ್ಮೀ ನಗರದ ಯುವಕ ಯೋಗೀಶ್ ಪೂಜಾರಿ (28) ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ತನ್ನ ಮೀನುಗಾರಿಕಾ ವೃತ್ತಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಜನರ ಗುಂಪೊಂದು ಲಕ್ಷ್ಮೀ ನಗರ ಅಡ್ಡ ರಸ್ತೆಯಲ್ಲಿ ಯೋಗೀಶ್ ಗೆ ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ, ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಮೂಲಗಳ ಪ್ರಕಾರ ವರ್ವಾಡಿ ಪ್ರವೀಣ್ ಹತ್ಯೆ ಆರೋಪಿಗಳಾದ ಸುಜಿತ್ ಪಿಂಟೋ ಸಹಚರರು ಈ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆ ಮಾಡುವ ಕಾರ್ಯಾಚರಣೆ ಶುರುವಾಗಿದೆ.

- Advertisement -

Latest News

error: Content is protected !!