Monday, May 20, 2024
Homeತಾಜಾ ಸುದ್ದಿಬೆಂಗಳೂರು: H.A.L ಪೊಲೀಸ್ ಠಾಣೆಯ 12 ಸಿಬ್ಬಂದಿಗೆ ಕೊರೋನಾ ಸೋಂಕು..!

ಬೆಂಗಳೂರು: H.A.L ಪೊಲೀಸ್ ಠಾಣೆಯ 12 ಸಿಬ್ಬಂದಿಗೆ ಕೊರೋನಾ ಸೋಂಕು..!

spot_img
- Advertisement -
- Advertisement -

ಬೆಂಗಳೂರು : ನಗರದ ಎಚ್‌ಎಎಲ್ ಠಾಣೆಯ ಇನ್​ಸ್ಪೆಕ್ಟರ್, ಸಬ್ ಇನ್​ಸ್ಪೆಕ್ಟರ್ ಹಾಗೂ 10 ಜನ ಸಿಬ್ಬಂದಿ ಸೇರಿ ಒಟ್ಟು 12 ಮಂದಿಗೆ ಡೆಡ್ಲಿ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಸಾಮೂಹಿಕ ತಪಾಸಣೆಯಿಂದ ಬಯಲು
ಕರ್ನಾಟಕದಲ್ಲಿ 370ಕ್ಕೂ ಹೆಚ್ಚು ಪೊಲೀಸರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ರಾಜ್ಯದ ಎಲ್ಲ ಪೊಲೀಸರಿಗೂ ಕೊರೋನಾ ಪರೀಕ್ಷೆ ಮಾಡಿಸಲು ಪೊಲೀಸ್ ಇಲಾಖೆ ನಿರ್ಧರಿಸಿತ್ತು. ನಿನ್ನೆಯವರೆಗೆ ಸುಮಾರು 10 ಸಾವಿರ ಪೊಲೀಸರ ಕೊರೋನಾ ತಪಾಸಣೆ ನಡೆದಿದೆ. ಈ ತಪಾಸಣೆಯ ವರದಿಯಲ್ಲಿ ಬೆಂಗಳೂರಿನ ಎಚ್​ಎಎಲ್​ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್, ಸಬ್ ಇನ್​ಸ್ಪೆಕ್ಟರ್ ಹಾಗೂ 10 ಜನ ಸಿಬ್ಬಂದಿಯ ವೈದ್ಯಕೀಯ ತಪಾಸಣೆಯ ವರದಿಯಲ್ಲಿ ಸೋಂಕು ಪಾಸಿಟಿವ್ ಬಂದಿದೆ.

ಕಳ್ಳನಿಂದ ಹರಡಿದ ಕೊರೋನಾ:
ದರೋಡೆ ಕೇಸ್​ನಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದ ಪೊಲೀಸರಿಗೆ ಆರೋಪಿಯ ವಿಚಾರಣೆ ಬಳಿಕ ಆತನಿಗೆ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿತ್ತು. ಕೂಡಲೇ ಆರೋಪಿಯ ಸಂಪರ್ಕದಲ್ಲಿದ್ದ ಪೊಲೀಸರು ಪರೀಕ್ಷೆಗೆ ಒಳಪಟ್ಟಿದ್ದರು. ಸದ್ಯ 12 ಜನ ಪೊಲೀಸರಿಗೆ ಪಾಸಿಟಿವ್ ಆಗಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಇಡೀ ಠಾಣೆಯನ್ನು ಬಿಬಿಎಂಪಿ ಸಿಬ್ಬಂದಿಗಳು ಸ್ಯಾನಿಟೈಸ್ ಮಾಡಿ ಸೀಲ್​ಡೌನ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!