Friday, June 5, 2026
HomeUncategorizedಮಂಗಳೂರು: ಕಳೆದ ನಾಲ್ಕು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರೌಡಿಶೀಟರ್‌ ಇಲ್ಯಾಸ್‌ ಹತ್ಯೆ ಪ್ರಕರಣದ ಆರೋಪಿ ಅರೆಸ್ಟ್

ಮಂಗಳೂರು: ಕಳೆದ ನಾಲ್ಕು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರೌಡಿಶೀಟರ್‌ ಇಲ್ಯಾಸ್‌ ಹತ್ಯೆ ಪ್ರಕರಣದ ಆರೋಪಿ ಅರೆಸ್ಟ್

- Advertisement -
- Advertisement -

ಮಂಗಳೂರು; ಕಳೆದ ನಾಲ್ಕು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ರೌಡಿಶೀಟರ್‌ ಇಲ್ಯಾಸ್‌ ಹತ್ಯೆ ಪ್ರಕರಣದ ಆರೋಪಿ ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್‌ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್‌ ಇಲ್ಯಾಸ್‌ನನ್ನು 2018ರ ಜ.13ರಂದು ಜೆಪ್ಪು ಎಂಬಲ್ಲಿ ಆತನ ಫ್ಲಾಟ್‌ನಲ್ಲೇ ಹತ್ಯೆ ನಡೆಸಲಾಗಿತ್ತು. ಪ್ರಕರಣ ಸಂಬಂಧ ಮೂವರು ಅರೋಪಿಗಳಾದ ದಾವುದ್‌, ರಿಯಾಝ್, ನಾಸಿರ್‌ನನ್ನು ಅಂದೇ ಬಂಧಿಸಿದ್ದು, ಸಮೀರ್‌ ತಲೆಮರೆಸಿಕೊಂಡಿದ್ದನು. ಆರೋಪಿ ಪಂಪ್‌ವೆಲ್‌ ಮೂಲಕ‌ ಬೆಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಮೇರೆಗೆ ಪಡೆದ ಉಳ್ಳಾಲ ಠಾಣಾಧಿಕಾರಿ ನೇತೃತ್ವದ ತಂಡ ಆತನನ್ನು ವಶಕ್ಕೆ ಪಡೆದಿದೆ.

- Advertisement -

Latest News

error: Content is protected !!