Sunday, May 19, 2024
Homeಮಹಾನ್ಯೂಸ್ಮುಂಬಯಿ: ಕನ್ನಡ ಸಂಘದ ಮಹಿಳಾ ವಿಭಾಗದಿಂದ ಲಾಕ್ ಡೌನ್ ನಿಂದ ಸಮಸ್ಯೆಗೊಳಗಾದವರಿಗೆ ನೆರವು

ಮುಂಬಯಿ: ಕನ್ನಡ ಸಂಘದ ಮಹಿಳಾ ವಿಭಾಗದಿಂದ ಲಾಕ್ ಡೌನ್ ನಿಂದ ಸಮಸ್ಯೆಗೊಳಗಾದವರಿಗೆ ನೆರವು

spot_img
- Advertisement -
- Advertisement -

ಮುಂಬಯಿ: ಲಾಕ್ ಡೌನ್ ನಿಂದ ದೇಶ ಸಂಕಷ್ಟದಲ್ಲಿದ್ದು, ಕೊರೊನಾ ಮಾಹಾಮಾರಿಯ ವಿರುದ್ಧ ಹೋರಾಡುತ್ತಿದೆ, ಈ ಸಂಧರ್ಭದಲ್ಲಿ ಮುಂಬಯಿ ಉಪನಗರದ ಮುಲುಂಡ್ ಪ್ರದೇಶದಲ್ಲಿ ನೆಲೆಸಿರುವ ಸ್ಥಾನೀಯ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಿರುವ ಬಡ ಮತ್ತು ದಲಿತರ ಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಸಮಾಜಮುಖಿ ಕಾಯಕಗಳಲ್ಲಿ ತೊಡಗಿಸಿ ಕೊಂಡಿರುವ ಡಾ|ರಜನಿ ವಿ. ಪೈ ದಿನಂಪ್ರತಿ ಬಾರೀ ಪ್ರಮಾಣದ ಪಡಿತರ, ದೈನಂದಿನ ಅತ್ಯವಶ್ಯಕ ವಸ್ತುಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಅಂಧೇರಿ ಪೂರ್ವದಲ್ಲಿನ ಕ್ಯಾನ್ಸರ್ ಪೀಡಿತ ಮಹಿಳೆಯೋರ್ವರಿಗೂ ಕಳೆದ ವಾರ ಆರೋಗ್ಯನಿಧಿಯನ್ನು ಒದಗಿಸಿ ಶಸ್ತ್ರಚಿಕಿತ್ಸೆಗೆ ಸಹಾಯಸ್ತ ನೀಡಿದ್ದು, ವಿಶೇಷವಾಗಿ ಚಾಳ್, ಕೊಳಚೆಪ್ರದೇಶಗಳಿಗೆ ಭೇಟಿ ನೀಡಿ ಅರ್ಹರಿಗೆ ನೆರವನ್ನು ನೀಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಇಲ್ಲಿನ ಸಿದ್ಧಿ ಮೂಲತಃ ರಜನಿ ವಿನಾಯಕ ಪೈ ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಮೂಲಕ ಜನಾನುರೆಣಿಸಿದ್ದು, ಮಹಾನಗರದ ಹಿರಿಯ ಕನ್ನಡ ಸಂಸ್ಥೆಯಾದ ಮುಂಬಯಿ ಕನ್ನಡ ಸಂಘ (ಮಾಟುಂಗ) ಇದರ ಮಹಿಳಾ ವಿಭಾಗಧ್ಯಕ್ಷೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್, ಕರ್ನಾಟಕ ವಿಕಾಸ ರತ್ನ, ಸೌರಭ ರತ್ನ, ಬೆಂಗಳೂರು ರತ್ನ-2018 ಪ್ರಶಸ್ತಿ, ಕ್ರಿಯಾಶೀಲ ಕನ್ನಡತಿ, ಅಂತಾರಾಷ್ಟ್ರೀಯ ಗೋಲ್ಡನ್ ಅಚೀವ್ಮೆಂಟ್ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ-2019 ಹೀಗೆ ಅನೇಕ ಪುರಸ್ಕಾರ, ಗೌರವಗಳು ಪ್ರಾಪ್ತಿಯಾಗಿವೆ.

ಇಂದು ಮುಂಬಯಿಯಲ್ಲಿ ಉದ್ಯೋಗದ ನಿಮಿತ್ತವಾಗಿ ನೆಲೆಸಿ ಉದ್ಯೋಗ ಇಲ್ಲದೆ, ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ಅನೇಕರಿಗೆ ಡಾ. ಪೈಯವರು ತಮ್ಮ ಸಹಾಯ ಹಸ್ತ ಚಾಚಿದ್ದು, ಮುಂಬಯಿ ಕನ್ನಡಿಗರ ಕ್ಷೇಮಾಭಿವೃದ್ಧಿಗೆ ದುಡಿಯುತ್ತಿದ್ದಾರೆ.

- Advertisement -
spot_img

Latest News

error: Content is protected !!