ಜೀರಿಗೆ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಅತ್ಯುತ್ತಮ ಆಹಾರವಾಗಿದೆ. ಇದನ್ನು ಪ್ರತಿದಿನ ಸೇವಿಸುವುದು ಉತ್ತಮ. ರಾತ್ರಿ ವೇಳೆ ಒಂದು ಗ್ಲಾಸ್ ನೀರಿಗೆ 2 ಚಮಚ ಜೀರಿಗೆ ಪುಡಿಸಿ ಮಿಕ್ಸ್ ಮಾಡಿ ಇಡಿ. ಮುಂಜಾನೆ ಎದ್ದು ಅದನ್ನು ಬಿಸಿ ಮಾಡಿ ಸೇವಿಸಿ. ಇದರಿಂದ ಏನೆಲ್ಲಾ ಲಾಭವಿದೆ ನೋಡಿ.
ಹೃದಯದ ಸಮಸ್ಯೆ : ದೇಹದಲ್ಲಿನ ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗುತ್ತದೆ. ಇದರಿಂದ ಹೃದಯದ ಸಮಸ್ಯೆಯಿಂದ ಬಚಾವಾಗಬಹುದು.
ಡಯಾಬಿಟೀಸ್ : ಇದರಿಂದ ದೇಹದಲ್ಲಿ ಗ್ಲೂಕೋಸ್ ಲೆವೆಲ್ ಮೆಂಟೈನ್ ಮಾಡಲು ಸಹಾಯವಾಗುತ್ತದೆ. ಇದರಿಂದ ಡಯಾಬಿಟೀಸ್ ಸಮಸ್ಯೆ ಕಾಡೋದಿಲ್ಲ.
ಮಸಲ್ಸ್ ನೋವು : ಈ ಡ್ರಿಂಕ್ ಸೇವಿಸೋದರಿಂದ ಬ್ಲಡ್ ಸರ್ಕ್ಯುಲೇಶನ್ ಸರಿಯಾಗುತ್ತದೆ. ಇದರಿಂದ ಮಸಲ್ಸ್ ರಿಲ್ಯಾಕ್ಸ್ ಆಗುತ್ತದೆ ಹಾಗೂ ನೋವು ನಿವಾರಣೆಯಾಗುತ್ತದೆ.
ಸ್ಕಿನ್ ಪ್ರಾಬ್ಲಂ : ದೇಹದಲ್ಲಿರುವ ಟಾಕ್ಸಿನ್ ನಿವಾರಣೆಯಾಗುತ್ತದೆ. ಅಲ್ಲದೆ ಸ್ಕಿನ್ ಸಮಸ್ಯೆಗಳಾದಂತಹ ಪಿಂಪಲ್, ರಾಶಸ್ ಮೊದಲಾದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
ಜೀರ್ಣಕ್ರಿಯೆ : ನಿಮ್ಮ ಜೀರ್ಣಕ್ರಿಯೆ ಸರಿಯಾಗಿಲ್ಲದೆ ಇದ್ದರೆ ಇದನ್ನು ಕುಡಿಯಿರಿ. ಇದರಲ್ಲಿರುವ ಫೈಬರ್ಸ್ ಜೀರ್ಣಕ್ರಿಯೆಯನ್ನು ಇಂಪ್ರೂವ್ ಮಾಡುತ್ತದೆ.
ತೂಕ ಹೆಚ್ಚಾಗಿದ್ದರೆ : ತೂಕ ಹೆಚ್ಚಾಗಿರುವವರು ಸಹ ಇದನ್ನು ಸೇವಿಸಬೇಕು. ಇದರಿಂದ ಮೆಟಾಬಾಲಿಸಂ ಹೆಚ್ಚುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ.
ರಕ್ತಹೀನತೆ ಸಮಸ್ಯೆ : ಇದರಲ್ಲಿ ಐರನ್ ಅಂಶ ಇರುತ್ತದೆ. ಇದರಿಂದ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
