Wednesday, June 24, 2026
Homeಕರಾವಳಿಮಂಗಳೂರುಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ನಲ್ಲಿ ಎಂಆರ್ ಪಿಎಲ್ ಸಿಎಸ್ಆರ್ ನಿಧಿಯಿಂದ 4 ಮತ್ತು...

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ನಲ್ಲಿ ಎಂಆರ್ ಪಿಎಲ್ ಸಿಎಸ್ಆರ್ ನಿಧಿಯಿಂದ 4 ಮತ್ತು 5ನೇ ಮಹಡಿ ನಿರ್ಮಾಣ

- Advertisement -
- Advertisement -

ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ನ ನಾಲ್ಕು ಮತ್ತು ಐದನೇ ಅಂತಸ್ತುಗಳ ಕಾಮಗಾರಿಗೆ ಸಿಎಸ್ ಆರ್ ಅನುದಾನವನ್ನು ನೀಡುವುದಾಗಿ ಎಂಆರ್ ಪಿಎಲ್ ದೃಢಪಡಿಸಿದೆ.

4 ನೇ ಅಂತಸ್ತಿನಲ್ಲಿ ಸಿಎಸ್ ಡಿ ವಿಭಾಗ ಮತ್ತು 52 ಹಾಸಿಗೆಗಳ ವಾರ್ಡ್, ಐದನೇ ಅಂತಸ್ತಿನಲ್ಲಿ 22 ಹಾಸಿಗೆಗಳ ವಾರ್ಡ್ ನಿರ್ಮಿಸಿ ಒಟ್ಟು 74 ಹಾಸಿಗೆಗಳ ವ್ಯವಸ್ಥೆ
ಕಲ್ಪಿಸಲು ಯೋಜಿಸಲಾಗಿದೆ.

ಈ ಕಾಮಗಾರಿಗೆ ಅಗತ್ಯವಿರುವ 10 ಕೋಟಿ ರೂಪಾಯಿ ಎಂಆರ್ ಪಿಎಲ್ ನೀಡಲಿದ್ದು, ಹೊಸ ಕಟ್ಟಡದ ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ಒದಗಿಸುವ ಜವಾಬ್ದಾರಿಯನ್ನು ಹಳೆಯ ಒಪ್ಪಂದದಂತೆ ಕೆಎಂಸಿ ಸಂಸ್ಥೆ ಪೂರೈಸಲು ಒಪ್ಪಿಗೆ ನೀಡಿದೆ.

ಮೆಡಿಸಿನ್ ಬ್ಲಾಕ್ ನಿರ್ಮಾಣದ ಸಂದರ್ಭದಲ್ಲಿ ಮೂಲ ಯೋಜನೆಯಂತೆ ನೆಲ ಅಂತಸ್ತು ಸೇರಿ ಐದು ಅಂತಸ್ತುಗಳ ನಕ್ಷೆ ತಯಾರಿಸಲಾಗಿದ್ದು, ಅನುದಾನದ ಲಭ್ಯತೆಯ ಮೇಲೆ ಮೂರು ಅಂತಸ್ತುಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ.

- Advertisement -

Latest News

error: Content is protected !!