Wednesday, June 24, 2026
Homeತಾಜಾ ಸುದ್ದಿಲೋಕಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಕಾಗದ ಹರಿದು ಎಸೆದು ಗದ್ದಲ; ಎಂಟು ವಿಪಕ್ಷ ಸಂಸದರ ಅಮಾನತು

ಲೋಕಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಕಾಗದ ಹರಿದು ಎಸೆದು ಗದ್ದಲ; ಎಂಟು ವಿಪಕ್ಷ ಸಂಸದರ ಅಮಾನತು

- Advertisement -
- Advertisement -

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಐದನೇ ದಿನದ ಲೋಕಸಭಾ ಕಲಾಪದಲ್ಲಿ ಇಂದು ಗದ್ದಲ ಉಂಟಾಗಿದೆ. ಸ್ಪೀಕರ್ ಪೀಠದ ಮೇಲೆ ‌ಕಾಗದಗಳನ್ನು ವಿಪಕ್ಷಗಳ ಸಂಸದರು ಹರಿದು ಎಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿತ್ತು.

ಕಾಗದಗಳನ್ನು ಹರಿದೆಸೆದ ಹಿನ್ನೆಲೆಯಲ್ಲಿ ಎಂಟು‌ ಲೋಕಸಭಾ ಸದಸ್ಯರನ್ನು ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ.

ಸಂಸದರಾದ ಮಾಣಿಕ್ಯಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್, ರಾಜಾ ವಾರಿಂಗ್, ಕಿರಣ್ ಕುಮಾರ್ ರೆಡ್ಡಿ, ಎಸ್. ವೆಂಕಟೇಶನ್, ಹಿಬಿ ಈಡನ್, ದೀನ್ ಕುರಿಯಾಕೋಸ್ ಮತ್ತು ಪ್ರಶಾಂತ್ ಪಡೋಲೆ ಅವರನ್ನು ಅಮಾನತು ಮಾಡಲಾಗಿದೆ

- Advertisement -

Latest News

error: Content is protected !!