Wednesday, June 24, 2026
Homeತಾಜಾ ಸುದ್ದಿಬೆಳ್ತಂಗಡಿ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಮಡಂತ್ಯಾರು ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ...

ಬೆಳ್ತಂಗಡಿ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಮಡಂತ್ಯಾರು ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದ ಪ್ರಕರಣ: ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಬೆಳ್ತಂಗಡಿ: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ ಮಡಂತ್ಯಾರು ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಪ್ರಮೋದ್ ಪಿ. (50) ಹಾಗೂ ಕುಳಿ ಗ್ರಾಮದ ಅಬ್ದುಲ್ ನಝೀರ್ (43) ಬಂಧಿತರು.

ಪ್ರಕರಣದ ವಿವರ;

ದಿನಾಂಕ: 02.02.2026 ರಂದು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ  ಮಡಂತ್ಯಾರು  ಶಾಖೆಯಲ್ಲಿ  ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ಸಂಘ(ನಿ)ದಲ್ಲಿ ಬೆಳಿಗ್ಗೆ  2  ಗ್ರಾಹಕರು  ಬಂದು  ಅದರಲ್ಲಿ  ಆಪಾದಿತ  ಅಬ್ದುಲ್‌  ನಝೀರ್‌ ಎಂಬಾತನ  ಹೆಸರಿನಲ್ಲಿ  ಚಿನ್ನದ  ಸರ  ಅಡವಿಡಲು  ಇರುವುದಾಗಿ  ತಿಳಿಸಿದಂತೆ  3  ಚಿನ್ನದ  ಸರಗಳನ್ನು  ನೀಡಿದ್ದು,  ಈ ಚಿನ್ನವನ್ನು  ಪರೀವೀಕ್ಷಕರಲ್ಲಿ  ಪರಿಶೀಲನೆ  ನಡೆಸಿದಾಗ, ಅದರಲ್ಲಿ  ಮೂರು  ಚಿನ್ನದ  ಸರಗಳು  ನಕಲಿ ಎಂದು  ಸಾಬೀತಾಗಿದೆ. ಈ ಬಗ್ಗೆ ಬ್ರಾಂಚ್ ನ  ವ್ಯವಸ್ಥಾಪಕರು ನೀಡಿದ ದೂರಿನ ಅನ್ವಯ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 11/2026  ಕಲಂ: 318(4) ,62 ಜೊತೆಗೆ 3(5)  BNS 2023ಯಂತೆ ಪ್ರಕರಣ ದಾಖಲಾಗಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

Latest News

error: Content is protected !!