Tuesday, May 7, 2024
Homeತಾಜಾ ಸುದ್ದಿಮಂಗಳೂರು: ಲಾಭದತ್ತ ಮುನ್ನಡೆಯುತ್ತಿರುವ ಎಂಆರ್‌ಪಿಎಲ್: ದಾಖಲೆಯ 2,955 ಕೋಟಿ ರೂ.ಲಾಭ ಗಳಿಸಿರುವುದಾಗಿ ಸಂಸ್ಥೆ ಪ್ರಕಟಣೆ

ಮಂಗಳೂರು: ಲಾಭದತ್ತ ಮುನ್ನಡೆಯುತ್ತಿರುವ ಎಂಆರ್‌ಪಿಎಲ್: ದಾಖಲೆಯ 2,955 ಕೋಟಿ ರೂ.ಲಾಭ ಗಳಿಸಿರುವುದಾಗಿ ಸಂಸ್ಥೆ ಪ್ರಕಟಣೆ

spot_img
- Advertisement -
- Advertisement -

ಮಂಗಳೂರು: 2021-22ರ ಕಳೆದ ಆರ್ಥಿಕ ವರ್ಷದಲ್ಲಿ ಎಂಆರ್ ಪಿಎಲ್ ಸಂಸ್ಥೆ ದಾಖಲೆಯ 2,955 ಕೋಟಿ ರೂ.ಲಾಭ ಗಳಿಸಿದೆ ಎಂದು ಸಂಸ್ಥೆ ತಿಳಿಸಿದೆ. 2020-21ರಲ್ಲಿ ಸಂಸ್ಥೆ 761 ಕೋಟಿ ರೂ. ನಷ್ಟ ಅನುಭವಿಸಿತ್ತು.

ಸಂಸ್ಥೆ ನಿರ್ವಹಣೆಯ ಮೂಲಕ 86,064 ಕೋಟಿ ರೂ. ಆದಾಯ ಗಳಿಸಿದೆ. ಜನವರಿಯಿಂದ ಮಾರ್ಚ್ ವರೆಗಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಎಂಆರ್ ಪಿಎಲ್ ಸಂಸ್ಥೆ 3,008 ಕೋಟಿ ರೂ. ಲಾಭ ಗಳಿಸಿದೆ. 2020-21ರ ಆರ್ಥಿಕ ವರ್ಷಕ್ಕೆ ಇದನ್ನು ಹೋಲಿಸಿದರೆ ಸಾಮರ್ಥ್ಯದ ಬಳಕೆ ಶೇ.100.17ರಷ್ಟು ಹೆಚ್ಚಳಗೊಂಡಿದೆ. 4ನೇ ಹಣಕಾಸು ವರ್ಷದಲ್ಲಿ ಇದು 116.96ರಷ್ಟು ವೃದ್ಧಿಯಾಗಿದೆ.

2022ರ ಮಾರ್ಚ್ ನಲ್ಲಿ ಅತೀ ಹೆಚ್ಚು ಮೋಟಾರ್ ಸ್ಟ್ರೀಟ್ ಉತ್ಪಾದನೆ ಮತ್ತು ಹೆಚ್ಚಿನ ಪ್ರಮಾಣದ ಸ್ಪೀಡ್ ಡೀಸೆಲ್ ವಿತರಣೆಯನ್ನು ಎಂಆರ್ ಪಿಎಲ್ ಸಾಧಿಸಿದೆ. ಸಂಸ್ಥೆ ಎರಡು ರಾಜ್ಯ ಮಟ್ಟದ ಸುರಕ್ಷತಾ ಪ್ರಶಸ್ತಿ  ಮತ್ತು ತೈಲ ಹಾಗೂ ಅನಿಲ ಉದ್ಯಮದಲ್ಲಿ ಉತ್ತಮ‌ ಸುರಕ್ಷತಾ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ಎಂಆರ್ ಪಿಎಲ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!