ಮಾಜಿ ಕೇಂದ್ರ ಸಚಿವ, ಸಮಾಜವಾದಿ ಮುಖಂಡ, ರಾಜ್ಯಸಭಾ ಸದಸ್ಯ ಹಾಗೂ ಲೇಖಕ ಎಂ.ಪಿ.ವೀರೇಂದ್ರ ಕುಮಾರ್ ಗುರುವಾರ ರಾತ್ರಿ ನಿಧನರಾದರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 84 ವರ್ಷದ ವೀರೇಂದ್ರ ಕುಮಾರ್ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಲೋಕತಾಂತ್ರಿಕ ಜನತಾದಳದ ಅಧ್ಯಕ್ಷರಾಗಿದ್ದ ವಿರೇಂದ್ರ ಕುಮಾರ್ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು.
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ), ಭಾರತೀಯ ವೃತ್ತಪತ್ರಿಕೆಗಳ ಸೊಸೈಟಿ (ಐಎನ್‌ಎಸ್) ಅಧ್ಯಕ್ಷರಾಗಿ, ಮಾತೃಭೂಮಿ ಪತ್ರಿಕೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ವಯನಾಡ್‌ನ ಕಲ್ಪೆತ್ತಾದ ಸಾಂಪ್ರದಾಯಿಕ ಜೈನ ಕುಟುಂಬದಲ್ಲಿ ಜನಿಸಿದ ಅವರು, ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ ಮೂಲಕ ಸಕ್ರಿಯ ರಾಜಕಾರಣ ಆರಂಭಿಸಿದರು.
1996 ಮತ್ತು 1997 ರಲ್ಲಿ ಕೋಳಿಕ್ಕೋಡ್ ಸಂಸದರಾಗಿದ್ದ ಇವರು ಕೇಂದ್ರದಲ್ಲಿ ಸಚಿವರು ಆಗಿದ್ದರು, ಉತ್ತಮ ಬರಹಗಾರರಾಗಿದ್ದ ವಿರೇಂದ್ರ ಕುಮಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ- ಪುರಸ್ಕಾರಗಳು ಸಂದಿವೆ.


