Thursday, June 4, 2026
Homeತಾಜಾ ಸುದ್ದಿಕೆಆರ್‌ಎಸ್‌ ಡ್ಯಾಂ ಮೇಲೆ ಸಂಸದೆ ಫೋಟೋ ಶೂಟ್:‌ ಕಾನೂನು ಕ್ರಮಕ್ಕೆ ಶಾಸಕ ಒತ್ತಾಯ

ಕೆಆರ್‌ಎಸ್‌ ಡ್ಯಾಂ ಮೇಲೆ ಸಂಸದೆ ಫೋಟೋ ಶೂಟ್:‌ ಕಾನೂನು ಕ್ರಮಕ್ಕೆ ಶಾಸಕ ಒತ್ತಾಯ

- Advertisement -
- Advertisement -

ಮಂಡ್ಯ: ಕೆಆರ್‌ಸ್ ಡ್ಯಾಂ ಮೇಲೆ ಬೆಂಬಲಿಗರೊಂದಿಗೆ ಸಂಸದೆ ಸುಮಲತಾ ಫೋಟೋಶೂಟ್ ಮಾಡಿಸಿದ್ದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸಂಸದೆ ವಿರುದ್ಧ ಕಿಡಿಕಾರಿದ್ದಾರೆ.

ಕೆಆರ್ ಎಸ್ ಡ್ಯಾಮ್ ಮೇಲೆ ಬೇರೆ ಯಾರಾದ್ರು ಫೋಟೋ ಶೂಟ್ ಮಾಡಿಸಿದ್ದರೆ ಇಷ್ಟೊತ್ತಿಗೆ ಎಫ್‌ಐಆರ್ ದಾಖಲಾಗಿತ್ತು. ಸಂಸದರು ಡ್ಯಾಂ ಮೇಲೆ ವೈಯುಕ್ತಿಕ ಫೋಟೋ ಶೂಟ್ ಮಾಡಿಸಿದ್ದಾರೆ.. ಬಡವರು, ಸಾಮಾನ್ಯರು, ಎಂಪಿ, ಎಂಎಲ್‌… ಎಲ್ಲರಿಗೂ ಕಾನೂನು ಒಂದೇ. ಊರಿಗೆಲ್ಲ ಬುದ್ಧಿ ಹೇಳುವವರೇ ದಿನ ಬೆಳಗ್ಗೆ ಈ ಕೆಲಸ ಮಾಡ್ತಾರೆ. ಸಂಸದರು ಅನ್ನೋ ಕಾರಣಕ್ಕೆ ಫೋಟೋ ಶೂಟ್‌ಗೆ ಅವಕಾಶ ಕೊಡುವುದು ಸರಿಯಲ್ಲ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!