Sunday, June 7, 2026
Homeಕರಾವಳಿಉಡುಪಿಉಡುಪಿ: ಸಾವರ್ಕರ್‌ ಫ್ಲೆಕ್ಸ್‌ ಅಳವಡಿಕೆಗೆ ಕಾಂಗ್ರೆಸ್‌ ವಿರೋಧಿಸಿದ ಹಿನ್ನೆಲೆ: ಬಿಜೆಪಿ ಯುವಮೋರ್ಚಾದಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ...

ಉಡುಪಿ: ಸಾವರ್ಕರ್‌ ಫ್ಲೆಕ್ಸ್‌ ಅಳವಡಿಕೆಗೆ ಕಾಂಗ್ರೆಸ್‌ ವಿರೋಧಿಸಿದ ಹಿನ್ನೆಲೆ: ಬಿಜೆಪಿ ಯುವಮೋರ್ಚಾದಿಂದ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಯತ್ನ

- Advertisement -
- Advertisement -

ಉಡುಪಿ:  ಬ್ರಹ್ಮಗಿರಿ ಸರ್ಕಲ್ ನಲ್ಲಿ ಅಳವಡಿಸಿರುವ ಸಾವರ್ಕರ್ ಫ್ಲೆಕ್ಸ್ ಗೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್‌ ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.

ಸರ್ಕಲ್‌ನಲ್ಲಿ ಅಳವಡಿಸಿರುವ ಸಾವರ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬಳಿಕ ಅಲ್ಲೇ ಸಮೀಪ ಇರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಇದ್ರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದರು.

- Advertisement -

Latest News

error: Content is protected !!