Thursday, April 24, 2025
Homeತಾಜಾ ಸುದ್ದಿಸಂಸದ ಗೌತಮ್ ಗಂಭೀರ್ ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯಕ್ಕೆ ವಿದಾಯ..!; ತನ್ನನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆಗೊಳಿಸಿ...

ಸಂಸದ ಗೌತಮ್ ಗಂಭೀರ್ ಲೋಕಸಭೆ ಚುನಾವಣೆಗೂ ಮುನ್ನ ರಾಜಕೀಯಕ್ಕೆ ವಿದಾಯ..!; ತನ್ನನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದ ಗಂಭೀರ್

spot_img
- Advertisement -
- Advertisement -

ನವದೆಹಲಿ: ದೆಹಲಿ ಸಂಸದ ಗೌತಮ್ ಗಂಭೀರ್ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಶನಿವಾರದಂದು ತಮ್ಮನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಕೋರಿ ಮನವಿ ಮಾಡಿದ್ದು, ಈ ಕುರಿತು ಅವರು ತಮ್ಮ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

ಅವರು ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರಕ್ಕೆ ಮುಖ್ಯ ಕಾರಣ ತನ್ನ ಮುಂದಿನ ಜೀವನವನ್ನು ಕ್ರಿಕಟ್ ಕ್ಷೇತ್ರದಲ್ಲಿ ಕಳೆಯುವುದು ಎಂದು ತಿಳಿಸಿದ್ದಾರೆ.

ಪೂರ್ವ ದೆಹಲಿ ಸಂಸದರಾಗಿರುವ ಗಂಭೀರ್, ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಗೌತಮ್ ಗಂಭೀರ್, ‘ಕ್ರಿಕೆಟ್‌ ಸಂಬಂಧಿತ ಜವಾಬ್ದಾರಿಗಳತ್ತ ಗಮನ ಹರಿಸಬೇಕಾಗಿರುವುದರಿಂದ ನನ್ನನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಪಕ್ಷದ ಗೌರವಾನ್ವಿತ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಜನರ ಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಜೈ ಹಿಂದ್’ ಎಂದು ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!