Monday, June 8, 2026
Homeಕರಾವಳಿಸುಳ್ಯ:ಕಾಲು ಜಾರಿ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯು ಸಾವು!

ಸುಳ್ಯ:ಕಾಲು ಜಾರಿ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯು ಸಾವು!

- Advertisement -
- Advertisement -

ಸುಳ್ಯ: ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿಯೂ ಮೃತಪಟ್ಟ ಘಟನೆ ನಡೆದಿದೆ.

ಕೆಮ್ರಾಜೆ ಗ್ರಾಮದ ಮಾಪಲಕಜೆಯ ಸಂಗೀತಾ ಮತ್ತು ಆಕೆಯ ಮಗು ಮೃತ ದುರ್ದೈವಿಗಳು. ತೋಟದಲ್ಲಿನ ಕೆರೆಯ ಬಳಿ ಮಗು ಕಾಲು ಜಾರಿ ಬಿದ್ದಾಗ ಅದನ್ನು ರಕ್ಷಿಸಲು ಸಂಗೀತಾ ಕೂಡ ಕೆರೆಗೆ ಹಾರಿದ್ದಾರೆ. ಆದರೆ, ಈಜು ಬಾರದ ಕಾರಣ ಮಗುವಿನೊಂದಿಗೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಸಂಗೀತಾ ಅವರ ಮೃತದೇಹ ಮೇಲೆತ್ತಲಾಗಿದ್ದು, ಮಗುವಿನ ಮೃತದೇಹವನ್ನು ತೆಗೆಯುವ ಪ್ರಯತ್ನ ನಡೆಯುತ್ತಿದೆ.ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!