Wednesday, June 3, 2026
Homeಕರಾವಳಿಮಂಗಳೂರು; ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ; ಅದೃಷ್ಟವಶಾತ್ ಬದುಕಿ ಉಳಿದ ಓರ್ವ ಬಾಲಕಿ

ಮಂಗಳೂರು; ಕೊಡಿಯಾಲ್ ಬೈಲಿನಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ; ಅದೃಷ್ಟವಶಾತ್ ಬದುಕಿ ಉಳಿದ ಓರ್ವ ಬಾಲಕಿ

- Advertisement -
- Advertisement -

ಮಂಗಳೂರು : ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿ ಬುಧವಾರ ನಡೆದಿದೆ. ವಿಜಯಾ (33) ಹಾಗೂ ಶೋಭಿತಾ (4) ಮೃತ ದುರ್ದೈವಿಗಳು. ಅದೃಷ್ಟವಶಾತ್ 12 ವರ್ಷದ ಬಾಲಕಿ ಯಜ್ಞಾ ಬದುಕುಳಿದಿದ್ದಾಳೆ.

ಇತ್ತೀಚೆಗೆ ಪತಿ ಉಮೇಶ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಿಜಯಾ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ.

 ನೇಣು ಬಿಗಿದುಕೊಳ್ಳುವ ವೇಳೆ ಯಜ್ಞಾ ಕಾಲ ಬುಡದಲ್ಲಿ ಟಿಪಾಯಿಯಿದ್ದು, ಅದರ ಮೇಲೆ ಕಾಲಿಟ್ಟುಕೊಂಡು ರಕ್ಷಣೆಗಾಗಿ ಕೂಗಾಡಿದ್ದಾಳೆ. ಕೂಗಾಟ ಕೇಳಿದ ಸ್ಥಳೀಯರು ಓಡಿ ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಆದರೆ ವಿಜಯಾ (33) ಬಾಲಕಿ ಶೋಭಿತಾ (4) ಅಷ್ಟರಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!