ಕಲಬುರುಗಿ: ಹಠ ಮಾಡುತ್ತಿದ್ದ 4 ವರ್ಷದ ಮಗುವಿನ ಕೈಸುಟ್ಟು ಮಂಚಕ್ಕೆ ಕಟ್ಟಿದ ಅಮಾನವೀಯ ಘಟನೆ ನಡೆದಿದೆ.
ಮಲತಾಯಿಯೇ ಈ ಕೃತ್ಯ ಎಸಗಿರುವುದು ಬಯಲಾಗಿದ್ದು, 4 ವರ್ಷದ ಹುಡುಗನ ಕೈ ಸುಟ್ಟು ಮನೆಯೊಳಗೆ ಕಟ್ಟಿ ಹಾಕಿದ್ದ ಆರೋಪ ಕೇಳಿಬಂದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.ಎರಡು ದಿನಗಳಿಂದ ಮಗು ಆಚೆ ಬಾರದಿದ್ದಕ್ಕೆ ಸ್ಥಳೀಯರು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
ಮಗುವನ್ನು ಕೇಳಿಕೊಂಡು ಗ್ರಾಮಸ್ಥರು ಮನೆ ಬಳಿ ಬಂದಿದ್ದು,ಮಲತಾಯಿ ಆತನ ಹಗ್ಗದಿಂದ ಕಟ್ಟಿಹಾಕಿದ್ದಳು. ಕೆಂಡದಿಂದ ಮಗುವಿನ ಎರಡೂ ಕೈಗಳನ್ನ ಸುಡಲಾಗಿತ್ತು. ಮೊದಲ ಹೆಂಡತಿ ತೀರಿಕೊಂಡಿದ್ದಕ್ಕೆ 2ನೇ ವಿವಾಹವಾಗಿದ್ದ ತಂದೆ ಮನೆಯಿಂದ ಹೊರೋದಾಗ ಮಗನ ಮೇಲೆ ಈ ಕೃತ್ಯ ಎಸಗಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಣೆಯಲ್ಲಿ ಕೆಲಸಕ್ಕೆಂದು ಪತಿ ತೆರಳಿದ್ದಾಗ ಮಗು ಹೊರಗೆಲ್ಲೂ ಹೋಗದಂತೆ ಈ ರೀತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.ಸದ್ಯಮಲತಾಯಿಗೆ ಗ್ರಾಮಸ್ಥರು ಬೈದು ಬುದ್ದಿ ಹೇಳಿದ್ದು, ಮುಂದೆ ಈ ರೀತಿ ಮಾಡದಂತೆ ತಿಳಿಹೇಳಿದ್ದಾರೆ.


