Thursday, April 25, 2024
Homeಕ್ರೀಡೆವಿಶ್ವದ ಅತಿದೊಡ್ಡ ಕ್ರಿಕೆಟ್‌ ಮೈದಾನಕ್ಕೆ 'ನರೇಂದ್ರ ಮೋದಿ' ಹೆಸರು: ಮೊದಲಿದ್ದ ಹೆಸರೇನು ಗೊತ್ತಾ?

ವಿಶ್ವದ ಅತಿದೊಡ್ಡ ಕ್ರಿಕೆಟ್‌ ಮೈದಾನಕ್ಕೆ ‘ನರೇಂದ್ರ ಮೋದಿ’ ಹೆಸರು: ಮೊದಲಿದ್ದ ಹೆಸರೇನು ಗೊತ್ತಾ?

spot_img
- Advertisement -
- Advertisement -

ಅಹಮದಾಬಾದ್: ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಖ್ಯಾತಿಯ ಮೊಟೇರಾ ಕ್ರಿಕೆಟ್‌ ಸ್ಟೇಡಿಯಂ ಅನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಉದ್ಘಾಟಿಸಿದ್ದು, ಇದೇ ವೇಳೆ ಸರ್ದಾರ್ ಪಟೇಲ್ ಸ್ಟೇಡಿಯಂ ಎಂಬ ಹೆಸರನ್ನು ಬದಲಿಸಿ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗಿದೆ.

‘ಗುಜರಾತ್ ನಲ್ಲಿ ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಬೇಕೆನ್ನುವುದು ಮೋದಿಯವರು ಗುಜರಾತ್ ಸಿಎಂ ಆಗಿದ್ದ ಕಾಲದ ಕನಸು. ಅದು ಈಗ ಈಡೇರಿದೆ. ಹಾಗಾಗಿ ಕ್ರೀಡಾಂಗಣವನ್ನು ಅವರ ಹೆಸರಿನಿಂದಲೇ ಕರೆಯಲು ನಿರ್ಧರಿಸಲಾಗಿದೆ’ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಇದೀಗ ನರೇಂದ್ರ ಮೋದಿ ಸ್ಟೇಡಿಯಂ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸುವ ಮೂಲಕ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

63 ಎಕರೆ ವಿಸ್ತಾರವುಳ್ಳ ಈ ಕ್ರೀಡಾಂಗಣವನ್ನು ಅಂದಾಜು ₹ 800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಅಂಗಣದ ಆಸನ ಸಾಮರ್ಥ್ಯ 90 ಸಾವಿರ ಆದರೆ ಈ ಕ್ರೀಡಾಂಗಣದ್ದು 1.32 ಲಕ್ಷ. ‘ಕ್ರೀಡಾಂಗಣದ ಒಟ್ಟು ವಿಸ್ತಾರವು 32 ಒಲಿಂಪಿಕ್‌ ಗಾತ್ರದ ಫುಟ್‌ಬಾಲ್ ಅಂಗಣಗಳಿಗೆ ಸಮನಾಗಿದೆ’ ಎಂದು ಮಾಧ್ಯಮ ಮಾಹಿತಿ ವಿಭಾಗ ತಿಳಿಸಿದೆ.

ಮೆಲ್ಬರ್ನ್ ಕ್ರಿಕೆಟ್ ಅಂಗಣ ವಿನ್ಯಾಸಗೊಳಿಸಿರುವ ಆಸ್ಟ್ರೇಲಿಯಾದ ವಾಸ್ತುಶಿಲ್ಪಿ ಫರ್ಮ್ ಪಾಪ್ಯುಲಸ್ ಅವರ ಕೈಚಳಕವೇ ಅಹಮದಾಬಾದ್‌ನ ಈ ಕ್ರೀಡಾಂಗಣದ ನವೀಕರಣದಲ್ಲಿ ಅಡಗಿದೆ. ಕೆಂಪು ಮತ್ತು ಕಪ್ಪು ಎರಡೂ ಮಣ್ಣಿನಿಂದ ಸಿದ್ಧಪಡಿಸಲಾಗಿರುವ 11 ಪಿಚ್‌ಗಳು ಈ ಅಂಗಣದಲ್ಲಿರುವುದು ವಿಶೇಷ. ಕ್ರೀಡಾಂಗಣದ ಉದ್ಘಾಟನೆಯ ಸಂದರ್ಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ, ಕ್ರೀಡಾಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!