Wednesday, June 26, 2024
Homeಅಪರಾಧಮೂಳೂರಿನಲ್ಲಿ ಹೊಡೆದಾಟ ಪ್ರಕರಣ: ಆರು ಮಂದಿಯ ವಿರುದ್ಧ ದೂರು ದಾಖಲು

ಮೂಳೂರಿನಲ್ಲಿ ಹೊಡೆದಾಟ ಪ್ರಕರಣ: ಆರು ಮಂದಿಯ ವಿರುದ್ಧ ದೂರು ದಾಖಲು

spot_img
- Advertisement -
- Advertisement -

ಕಾಪು: ಇಲ್ಲಿನ ರಾಷ್ಟ್ರೀ ಹೆದ್ದಾರಿ 66ರ ಮೂಳೂರಿನ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಳ್ಳುತ್ತಿದ್ದ ಆರು ಮಂದಿಯ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿವಾರ ಸಂಜೆ 6.30 ಗಂಟೆಯ ವೇಳೆಗೆ ಕಾಪು ಪೊಲೀಸ್ ಠಾಣೆಯ ಎಎಸ್‌ಐ ರವೀಶ್ ಹೊಳ್ಳ ಸಿಬ್ಬಂದಿಗಳ ಜತೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಾರ್ವಜನಿಕ ಸ್ಥಳದಲ್ಲಿ 6 ಜನ ಪುರುಷರು ಸೇರಿಕೊಂಡು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಡುತ್ತಿರುವುದನ್ನು ಗಮನಿಸಿದ್ದರು.

ಕೂಡಲೇ ಸ್ಥಳಕ್ಕೆ ಹೋಗಿ ಜಗಳವನ್ನು ತಡೆಯಲು ಮುಂದಾಗಿದ್ದು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದು ಈ ವೇಳೆ 6 ಜನರಲ್ಲಿ 4 ಜನರು ಓಡಿ ಹೋಗಿದ್ದರು. ಉಳಿದ ಇಬ್ಬರನ್ನು ವಿಚಾರಿಸಲಾಗಿದ್ದು ಅವರು ಸ್ಥಳೀಯ ಬಾರ್‌ವೊಂದರಲ್ಲಿ ಕುಡಿದು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆಸಿ ಪರಸ್ಪರ ಜಗಳ ಮಾಡುತ್ತಿದ್ದುದಾಗಿ ತಿಳಿಸಿದ್ದರು.

ಅದರಂತೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವಂತೆ ಹೊಡೆದಾಡಿಕೊಳ್ಳುತ್ತಿದ್ದ ಹಂಜಾ ಶೇಖ್, ತುಫೇಲ್ ಹಾಗೂ ಸ್ಥಳದಿಂದ ಓಡಿ ಹೋಗಿರುವ ಮಸಾಬ್ ಉಚ್ಚಿಲ, ನಮೀತ್ ಉಚ್ಚಿಲ, ಸುಜಿತ್ ಉಚ್ಛಿಲ, ಕೃಷ್ಣರಾಜ ಕರ್ಕೇರ ಮೂಳೂರು ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -
spot_img

Latest News

error: Content is protected !!