Thursday, June 4, 2026
Homeಕರಾವಳಿಮಂಗಳೂರುಮೂಡಬಿದಿರೆ: ಅಪ್ರಾಪ್ತ ಮಗಳನ್ನು ಅತ್ಯಾಚಾರಗೈದ ಗರ್ಭಿಣಿಯನ್ನಾಗಿಸಿದ ಅಪ್ಪ; ತಂದೆಯನ್ನು ಬಂಧಿಸಿದ ಪೊಲೀಸರು

ಮೂಡಬಿದಿರೆ: ಅಪ್ರಾಪ್ತ ಮಗಳನ್ನು ಅತ್ಯಾಚಾರಗೈದ ಗರ್ಭಿಣಿಯನ್ನಾಗಿಸಿದ ಅಪ್ಪ; ತಂದೆಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮೂಡಬಿದಿರೆ: ಅಪ್ರಾಪ್ತ ಮಗಳನ್ನು ಅತ್ಯಾಚಾರಗೈದ ಗರ್ಭಿಣಿಯನ್ನಾಗಿಸಿದ ಅಪ್ಪನನ್ನು ಪೊಲೀಸರು ಬಂಧಿಸಿರುವ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.

ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ಆರೋಪಿ ಆರು ತಿಂಗಳ ಹಿಂದೆ ಮನೆಯಲ್ಲೇ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.ಪ್ರೌಢಶಾಲೆಯಲ್ಲಿ ಓದುತ್ತಿರುವ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಆರೋಪಿ ತಂದೆಯೇ ಆಕೆಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಬಾಲಕಿ ಆರು ತಿಂಗಳ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬಾಲಕಿಯ ತಂದೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ಬೇರೆಯವರ ಹೆಸರು ಹೇಳಿದ್ದನೆನ್ನಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಗುರುವಾರ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!