Friday, June 5, 2026
Homeತಾಜಾ ಸುದ್ದಿಅಮ್ಮ ಮಗನ ಈ ಡ್ಯಾನ್ಸ್ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ

ಅಮ್ಮ ಮಗನ ಈ ಡ್ಯಾನ್ಸ್ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ

- Advertisement -
- Advertisement -

ನಾವೆಲ್ಲಾ ಸೋಷಿಯಲ್ ಮೀಡಿಯಾದಿಂದಾಗಿ ಹಾಗಾಯ್ತು, ಹೀಗಾಯ್ತು ಅಂತಾ ಪ್ರತಿದಿನ ಒಂದೊಂದು ರೀತಿಯ ಸುದ್ದಿಗಳನ್ನು ನೋಡ್ತಾನೇ ಇರ್ತೀವಿ. ನಾವು ಕೂಡ ಈ ಬಗ್ಗೆ ಮಾತಾಡ್ತೀವಿ. ಆದ್ರೆ ಸೋಷಿಯಲ್ ಮೀಡಿಯಾದಿಂದಾಗಿ ಎಷ್ಟು ಕೆಟ್ಟದಾಗಿದೆಯೋ ಅದಕ್ಕಿಂತ ಹೆಚ್ಚು ಒಳ್ಳೆಯದಾಗಿದೆ ಅನ್ನೋದು ಮಾತ್ರ ಸತ್ಯ.

ಅದರಲ್ಲೂ ಮುಖ್ಯವಾಗಿ ಎಷ್ಟೋ ಬೆಳಕಿ ಬಾರದ ಪ್ರತಿಭೆಗಳು ಇವತ್ತು ಸೋಷಿಯಲ್ ಮೀಡಿಯಾದ ಮೂಲಕ ಬೆಳಕಿ ಬಂದಿದೆ. ಎಷ್ಟೋ ಮಂದಿಯಲ್ಲಿ ಪ್ರತಿಭೆ ಇದ್ದರೂ ಅವರಿಗೆ ಸರಿಯಾದ ವೇದಿಕೆ ಸಿಗ್ತಿಲ್ಲ ಅಂತಾ ಬೇಸರಿಸಿಕೊಳ್ಳುತ್ತಿದ್ದರು. ಅಂತಹ ಅನೇಕರ ಟ್ಯಾಲೆಂಟ್ ಸಾಮಾಜಿಕ ಜಾಲತಾಣದ ಮೂಲಕ ಇವತ್ತು ಬೆಳಕಿಗೆ ಬಂದು ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಹೀಗಿರುವಾಗಲೇ ಫೇಸ್ ಬುಕ್ ನಲ್ಲಿ ಅಮ್ಮ- ಮಗನ ಡ್ಯಾನ್ಸ್ ಒಂದು ಭಾರೀ ಸದ್ದು ಮಾಡುತ್ತಿದೆ. ಮೊನ್ನೆಯಗಷ್ಟೇ ಜೋಗಿ ಸಿನಿಮಾ ರಿಲೀಸ್ ಆಗಿ 15 ವರ್ಷಗಳಾಯ್ತು. ಇದೇ ಖುಶಿಯಲ್ಲಿರುವಾಗ ಇದೇ ಸಿನಿಮಾದ ತಾಯಿ ಕುರಿತಾದ ಹಾಡಿಗೆ ಅಮ್ಮ- ಮಗ ಜೋಡಿಯೊಂದು ಅದ್ಭುತವಾಗಿ ಹೆಜ್ಜೆ ಹಾಕಿದೆ. ಇವರ್ಯಾರು ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಡ್ಯಾನ್ಸ್ ಮಾತ್ರ ಭಾರೀ ವೈರಲ್ ಆಗಿದೆ.

ಜೋಗಿ ಚಿತ್ರ 15 ವರ್ಷದ ಸಂಭ್ರಮಕ್ಕೆ ಚಿತ್ರದ ಹಾಡಿಗೆ ಈ ಅಮ್ಮ ಮಗನ ಡಾನ್ಸ್ ಒಂದು ಸಲ ನೋಡಿ.. ಫಿದಾ ಆಗೋಗ್ತೀರಾ..

Posted by Sonu Pattar on Sunday, 23 August 2020

- Advertisement -

Latest News

error: Content is protected !!