Thursday, April 25, 2024
Homeತಾಜಾ ಸುದ್ದಿತಲಕಾವೇರಿ: ಮೃತ ಪ್ರಧಾನ ಅರ್ಚಕರ ಕುಟುಂಬದವರಿಗೆ ಚೆಕ್ ವಿತರಣೆಯಲ್ಲಿ ಗೊಂದಲ, ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಅರ್ಚಕರ...

ತಲಕಾವೇರಿ: ಮೃತ ಪ್ರಧಾನ ಅರ್ಚಕರ ಕುಟುಂಬದವರಿಗೆ ಚೆಕ್ ವಿತರಣೆಯಲ್ಲಿ ಗೊಂದಲ, ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಅರ್ಚಕರ ಪುತ್ರಿಯರು

spot_img
- Advertisement -
- Advertisement -

ಕೊಡಗು: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದ ಹಿನ್ನೆಲೆಯಲ್ಲಿ ಮೃತರಾಗಿರುವ ತಲಕಾವೇರಿಯ ದೇವಸ್ಥಾನದ ಪ್ರಧಾನ ಅಚ೯ಕ ನಾರಾಯಾಣಾಚಾರ್ ರವರ ಎರಡು ಪುತ್ರಿಯವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದರಿಂದ ರಾಜ್ಯ ಸರ್ಕಾರ ನೀಡಿರುವ 5 ಲಕ್ಷ ರೂ. ಚೆಕ್ ವಿತರಣೆಯನ್ನು ಕೊಡಗು ಜಿಲ್ಲಾಡಳಿತ ತಡೆ ಹಿಡಿದಿದೆ.

ಆಗಸ್ಟ್‌ 6ರಂದು ಗಜಗಿರಿ ಭೂ ಕುಸಿತ ಪ್ರಕರಣದಲ್ಲಿ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್‌ ಸೇರಿದಂತೆ ಐವರು ನಾಪತ್ತೆಯಾಗಿದ್ದರು. ನಂತರ ಕಾರ್ಯಾಚರಣೆ ತಂಡದ ಹುಡುಕಾಟದ ಸಂದರ್ಭ ಆಗಸ್ಟ್ 8ರಂದು ನಾರಾಯಣಾಚಾರ್‌ ಸಹೋದರ ಸ್ವಾಮಿ ಆನಂದತೀರ್ಥ, ಆಗಸ್ಟ್ 11ರಂದು ನಾರಾಯಣಾಚಾರ್‌ ಹಾಗೂ ಆಗಸ್ಟ್ 15ರಂದು ಸಹಾಯಕ ಅರ್ಚಕ ಬಂಟ್ವಾಳ ಮೂಲದ ರವಿಕಿರಣ್‌ ಮೃತದೇಹಗಳು ದೊರೆತಿದ್ದವು. ಆದರೆ ನಾರಾಯಣಾಚಾರ್‌ ಪತ್ನಿ ಶಾಂತಾ ಆಚಾರ್‌ ಮತ್ತು ಮತ್ತೊಬ್ಬ ಸಹಾಯಕ ಅರ್ಚಕ ಶ್ರೀನಿವಾಸ್‌ ಪಡ್ಡಿಲಾಯ ಅವರ ಸುಳಿವು ಈವರೆಗೆ ಸಿಕ್ಕಿಲ್ಲ.

ಮೃತದೇಹ ಪತ್ತೆಯಾದ ಪ್ರತಿ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ಹಣದ ಚೆಕ್ ನೀಡಲಾಗಿದೆ. ಆದರೆ ಪ್ರಧಾನ ಅಚ೯ಕ ನಾರಾಯಾಣಾಚಾರ್ ರವರ ಎರಡು ಪುತ್ರಿಯವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದರಿಂದ ರಾಜ್ಯ ಸರ್ಕಾರ ನೀಡಿರುವ 5 ಲಕ್ಷ ರೂ. ಚೆಕ್ ವಿತರಣೆಗೆ ಅಡ್ಡಿಯಾಗಿದೆ. ಆಗಸ್ಟ್ 15ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣರವರು ಮೃತ ನಾರಾಯಾಣಾಚಾರ್ ರವರ ಎರಡು ಪುತ್ರಿಯವರಿಗೆ ತಲಾ 2.5 ಲಕ್ಷ ರೂ ಮೊತ್ತದ ಚೆಕ್ ವಿತರಿಸಿದ್ದರು.

ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಕುಸಿದ ಸಮಯದಲ್ಲಿ ಮಣ್ಣಿನ ಅಡಿಯಲ್ಲಿ ನಾರಾಯಣ ಆಚಾರ್ ಅವರ ಕುಟುಂಬ ಸಿಲುಕಿರುವ ಸುದ್ದಿ ತಿಳಿಯುತ್ತಿದ್ದಂತೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ನೆಲೆಸಿದ್ದ ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದಾ ಮತ್ತು ನಮಿತಾ ಕೊಡಗಿಗೆ ಆಗಮಿಸಿ ಪೊಲೀಸ್ ದೂರು ನೀಡಿದ್ದರು. ಆ ಸಮಯದಲ್ಲಿ ತಮ್ಮ ಹೆಸರು ಶಾರದಾ ಮತ್ತು ನಮಿತಾ ಎಂದೇ ನಮೂದಿಸಿದ್ದರು. ಅದರಂತೆ ಸರ್ಕಾರದ ಚೆಕ್ ನಲ್ಲೂ ಅದೇ ಹೆಸರು ಬರೆಯಲಾಗಿತ್ತು.

ಆದರೆ ಚೆಕ್ ಮೊತ್ತ ಬ್ಯಾಂಕ್ ಖಾತೆಗೆ ಜಮೆ ಮಾಡುವಾಗ ಹೊಸ ಸತ್ಯವೊಂದು ಗೊತ್ತಾಗಿದೆ. ನಾರಾಯಣ ಆಚಾರ್ ರ ಪುತ್ರಿಯರು ಈಗಾಗಲೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಹಾಗೆಯೆ ದಾಖಲೆಗಳಲ್ಲಿ ಶೆನೊನ್ ಫೆರ್ನಾಂಡಿಸ್ (ಶಾರದಾ) ಮತ್ತು ನಮಿತಾ ನಜೆರತ್ ಎಂದು ಹೆಸರು ಇದೆ.

ಶಾರದಾ ಮತ್ತು ನಮಿತಾ ಹೆಸರಿಗೆ ನೀಡಿರುವ ಚೆಕ್ ಗಳನ್ನು ತಮ್ಮ ದಾಖಲೆಗಳಲ್ಲಿ ಇರುವ ಹೆಸರಿನಂತೆ ಚೆಕ್ ನೀಡುವಂತೆ ಮಡಿಕೇರಿಯ ತಹಶೀಲ್ದಾರ್ ಮಹೇಶ್ ಜೆ ಗೆ ಮನವಿ ಸಲ್ಲಿಸಿದ್ದಾರೆ.

ಹಿಂದೂ ನಾಯಕನಾಗಿ ಗುರುತಿಸಿಕೊಂಡಿದ್ದ ನಾರಾಯಣ ಆಚಾರ್
ಮೃತ ನಾರಾಯಣ ಆಚಾರ್ ಹಿಂದೂ ಸಂಘಟನೆಗಳಲ್ಲಿ ಮತ್ತು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಹಾಗೆಯೆ ಭಾಗಮಂಡಲ ಎಪಿಎಂಸಿ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಬೆಂಬಲದಿಂದ ಚುನಾಯಿತರಾಗಿದ್ದರು.

- Advertisement -
spot_img

Latest News

error: Content is protected !!