Friday, April 19, 2024
Homeತಾಜಾ ಸುದ್ದಿದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರದ ನೀತಿಯ ಅಗತ್ಯವಿದೆ:ಎಲ್ಲ ಧರ್ಮಕ್ಕೆ ಅನ್ವಯಿಸುವ ಜನಸಂಖ್ಯಾ ನೀತಿ ಜಾರಿ ಮಾಡಿ:...

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರದ ನೀತಿಯ ಅಗತ್ಯವಿದೆ:ಎಲ್ಲ ಧರ್ಮಕ್ಕೆ ಅನ್ವಯಿಸುವ ಜನಸಂಖ್ಯಾ ನೀತಿ ಜಾರಿ ಮಾಡಿ: ಮೋಹನ್‌ ಭಾಗವತ್‌

spot_img
- Advertisement -
- Advertisement -

ನಾಗ್ಪುರ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್  ಇಂದು ಭಾರತಕ್ಕೆ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರದ ನೀತಿಯ ಅಗತ್ಯವಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಆರ್​ಎಸ್​ಎಸ್​ ಸಂಸ್ಥಾಪನಾ ದಿನದ ನಿಮಿತ್ತ ನಾಗಪುರದಲ್ಲಿ ನಡೆದ ವಿಜಯದಶಮಿ ಹಬ್ಬದ ಉತ್ಸವದಲ್ಲಿ ಮಾತನಾಡಿದ ಅವರು, ಭಾರತದ ಜನಸಂಖ್ಯೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದೇಶ ಒಡೆಯುವ ಭೀತಿ ಹೆಚ್ಚಾಗುವ ಕುರಿತು ಉಲ್ಲೇಖಿಸಿದ್ದಾರೆ. ಅಲ್ಲದೇ ಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು “ಧರ್ಮ ಆಧಾರಿತ ಅಸಮತೋಲನ” ಮತ್ತು “ಬಲವಂತದ ಮತಾಂತರ” ವನ್ನು ಉಲ್ಲೇಖಿಸಿದ್ದಾರೆ.

ಜನಸಂಖ್ಯಾ ನಿಯಂತ್ರಣ ಪ್ರಮುಖ ವಿಷಯವಾಗಿದೆ. ಆದ್ದರಿಂದ ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು. ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಆಗ ಮಾತ್ರ ಜನಸಂಖ್ಯೆ ನಿಯಂತ್ರಣದ ಕ್ರಮಗಳು ಫಲ ನೀಡಲು ಸಾಧ್ಯ ಎಂದರು.


- Advertisement -
spot_img

Latest News

error: Content is protected !!