Monday, June 8, 2026
Homeತಾಜಾ ಸುದ್ದಿ'ಟಿಕ್ ಟಾಕ್' ನನ್ನ ಜೀವನದ ಟರ್ನಿಂಗ್ ಪಾಯಿಂಟ್: ಕನ್ನಡದ ನಟಿ

‘ಟಿಕ್ ಟಾಕ್’ ನನ್ನ ಜೀವನದ ಟರ್ನಿಂಗ್ ಪಾಯಿಂಟ್: ಕನ್ನಡದ ನಟಿ

- Advertisement -
- Advertisement -

ಬೆಂಗಳೂರು: ಭಾರತ-ಚೀನಾ ಗಡಿ ಸಂಘರ್ಷದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ 59 ಚೀನಾ ಆಪ್ ಗಳನ್ನು ಬ್ಯಾನ್ ಮಾಡಿದ್ದು, ಇದರಲ್ಲಿ ಜನಪ್ರಿಯ ಆಯಪ್ ಟಿಕ್ ಟಾಕ್ ಕೂಡ ಒಂದು. ಹಲವರು ಈ ಟಿಕ್ ಟಾಕ್ ಆಯಪ್ ನ್ನು ಉಪಯೋಗಿಸುತ್ತಿದ್ದರು. ಅವರಲ್ಲಿ ಸ್ಯಾಂಡಲ್ ವುಡ್ ನಟಿ ರೀಷ್ಮಾ ನಾಣಯ್ಯ ಕೂಡ ಒಬ್ಬರು.

ಈ ಮನರಂಜನಾ ಆಯಪ್ ಮೂಲಕ ರೀಷ್ಮಾ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ನೃತ್ಯ, ನಟನೆ ವಿಡಿಯೋಗಳ ಮೂಲಕ 1,85,000 ಫಾಲೋವರ್ಸ್ ಹೊಂದಿದ್ದ ಕೊಡಗಿನ ಬೆಡಗಿ ಟಿಕ್ ಟಾಕ್ನಲ್ಲಿ 300 ಕ್ಕೂ ಹೆಚ್ಚು ವಿಡಿಯೋಗಳನ್ನು ಮಾಡಿದ್ದರು.

ಈ ಒಂದು ಅಪ್ಲಿಕೇಶನ್ ಮೂಲಕ ಜನರು ನನ್ನನ್ನು ಗುರುತಿಸಿದ್ದರು. ಅನೇಕರು ನನ್ನ ಸಾಮರ್ಥ್ಯವನ್ನು ಗಮನಿಸಿದ್ದರು. ಒಂದರ್ಥದಲ್ಲಿ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿ ಟಿಕ್ ಟಾಕ್ ಪ್ರಮುಖ ಪಾತ್ರವಹಿಸಿತ್ತು ಎಂದು ರೀಷ್ಮಾ ಹೇಳಿದರು.

ಎಲ್ಲರ ಲೈಫ್ನಲ್ಲೂ ಒಂದು ಗೇಮ್ ಚೇಂಜರ್ ಇರುವಂತೆ ನನ್ನ ಜೀವನದ ಬದಲಾವಣೆಗೆ ಕಾರಣವಾಗಿದ್ದು ಟಿಕ್ ಟಾಕ್. ಇದೀಗ ಆಯಪ್ ಡಿಲೀಟ್ ಆಗಿದೆ. ಈ ಮೂಲಕ ಹೆಸರುಗಳಿಸಿದ್ದ ಎಲ್ಲರಿಗೂ ಇದು ನೋವಿನ ಸಂಗತಿ. ನಾನು ಕೂಡ ತುಂಬಾ ನಾಚಿಕೆ ಸ್ವಭಾವದವಳಾಗಿದ್ದೆ. ಒಂದು ಬಾರಿ ಟಿಕ್ ಟಾಕ್ನಲ್ಲಿ ವಿಡಿಯೋ ಹಾಕಿದ್ದೆ. ಇದನ್ನು ನೋಡಿ ತುಂಬಾ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಬಳಿಕ ನಾನಲ್ಲೂ ಆತ್ಮ ವಿಶ್ವಾಸ ಮೂಡಿತು ಎಂದು ರೀಷ್ಮಾ ತಿಳಿಸಿದ್ದಾರೆ.

- Advertisement -

Latest News

error: Content is protected !!