Thursday, June 4, 2026
Homeಕರಾವಳಿಉಡುಪಿಉಡುಪಿಯಲ್ಲಿ ನಾಲ್ವರು ಹತ್ಯೆಗೊಳಗಾದ ಮನೆಗೆ ಎಂಎಲ್ಸಿ ಮಂಜುನಾಥ್ ಭಂಡಾರಿ ಭೇಟಿ: ನೂರ್ ಮಹಮ್ಮದ್ ಗೆ ದೂರವಾಣಿ...

ಉಡುಪಿಯಲ್ಲಿ ನಾಲ್ವರು ಹತ್ಯೆಗೊಳಗಾದ ಮನೆಗೆ ಎಂಎಲ್ಸಿ ಮಂಜುನಾಥ್ ಭಂಡಾರಿ ಭೇಟಿ: ನೂರ್ ಮಹಮ್ಮದ್ ಗೆ ದೂರವಾಣಿ ಮೂಲಕ ಗೃಹ ಸಚಿವರ ಸಾಂತ್ವನ

- Advertisement -
- Advertisement -

ಉಡುಪಿ: ನೇಜಾರು ಸಮೀಪದ ತೃಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಹತ್ಯೆ ನಡೆದ ಮನೆಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಇಂದು ಭೇಟಿ ನೀಡಿದರು.

ಮೃತ ಹಸೀನಾ ಅವರ ಪತಿ ನೂರ್ ಮಹಮ್ಮದ್ ಮತ್ತು ಪುತ್ರನನ್ನು ಭೇಟಿ ಮಾಡಿದ ಮಂಜುನಾಥ ಭಂಡಾರಿ ಸಾಂತ್ವನ ಹೇಳಿ ಕೃತ್ಯ ನಡೆಸಿದ ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದರು.

ಇದೇ ವೇಳೆ ನೂರ್ ಮೊಹಮ್ಮದ್ ಅವರ ಜೊತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

ಮಂಜುನಾಥ್ ಭಂಡಾರಿ ಅವರ ಮೊಬೈಲ್ ಫೋನ್ ಮೂಲಕ ಸಾಂತ್ವನ ಹೇಳಿದ ಗೃಹ ಸಚಿವ ಪರಮೇಶ್ವರ್, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚುವ ಭರವಸೆ ನೀಡಿದರಲ್ಲದೇ ಕುಟುಂಬಕ್ಕೆ ಭದ್ರತೆ ನೀಡುವುದಾಗಿ ಹೇಳಿದ್ದಾರೆ.

ತಮ್ಮ ಕುಟುಂಬದ ನಾಲ್ವರ ಕೊಲೆ ನಡೆದ ವೇಳೆ ವಿದೇಶದಲ್ಲಿದ್ದ ನೂರ್ ಮಹಮ್ಮದ್ ತಮ್ಮ ಮನೆಗೆ ವಾಪಸಾಗಿದ್ದಾರೆ.

- Advertisement -

Latest News

error: Content is protected !!