Thursday, June 4, 2026
Homeತಾಜಾ ಸುದ್ದಿಬೆನ್ನು ಹುರಿ ಅಪಘಾತವಾದ ವಿಕಲಾಂಗರಿಗೆ 5 ಸಾವಿರ ರೂ. ಮಾಸಾಶನ ಕೊಡಿ:ವಿಧಾನ ಪರಿಷತ್ ನಲ್ಲಿ ಎಂಎಲ್ಸಿ‌...

ಬೆನ್ನು ಹುರಿ ಅಪಘಾತವಾದ ವಿಕಲಾಂಗರಿಗೆ 5 ಸಾವಿರ ರೂ. ಮಾಸಾಶನ ಕೊಡಿ:ವಿಧಾನ ಪರಿಷತ್ ನಲ್ಲಿ ಎಂಎಲ್ಸಿ‌ ಕೆ. ಹರೀಶ್ ಕುಮಾರ್ ಒತ್ತಾಯ

- Advertisement -
- Advertisement -

ಬೆಳಗಾವಿ: ರಾಜ್ಯದಲ್ಲಿ ಬೆನ್ನು ಹುರಿ ಅಪಘಾತ ಆದ ವಿಕಲಾಂಗರಿಗೆ ಐದು ಸಾವಿರ ರೂಪಾಯಿ ಮಾಸಾಶನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪಾಲ್ಗೊಂಡ ಎಂಎಲ್ಸಿ ಹರೀಶ್ ಕುಮಾರ್ ರಾಜ್ಯದಲ್ಲಿ ಇಪ್ಪತ್ತು ಸಾವಿರ ಬೆನ್ನು ಹುರಿ ವಿಕಲಾಂಗರು ಇದ್ದು ಅವರ ಜೀವನಕ್ಕೆ ಐದು ಸಾವಿರ ರೂಪಾಯಿ ಮಾಸಾಶಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆನ್ನುಹುರಿ ಅಪಘಾತ ಆದ ವಿಕಲಾಂಗರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಘಟಕಗಳಿದ್ದು, ವಿಕಲಚೇತನ ಸೌಲಭ್ಯ ಒದಗಿಸುವುದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಆಗಬೇಕು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!