Sunday, June 7, 2026
Homeತಾಜಾ ಸುದ್ದಿದಲಿತ ಸ್ವಾಮೀಜಿಗೆ ತುತ್ತು ತಿನ್ನಿಸಿ ಸ್ವಾಮೀಜಿ ಬಾಯಿಂದಲೇ ತುತ್ತು ವಾಪಸ್ ಪಡೆದು ತಿಂದ ಶಾಸಕ ಜಮೀರ್...

ದಲಿತ ಸ್ವಾಮೀಜಿಗೆ ತುತ್ತು ತಿನ್ನಿಸಿ ಸ್ವಾಮೀಜಿ ಬಾಯಿಂದಲೇ ತುತ್ತು ವಾಪಸ್ ಪಡೆದು ತಿಂದ ಶಾಸಕ ಜಮೀರ್ ಅಹಮದ್!

- Advertisement -
- Advertisement -

ಬೆಂಗಳೂರು: ದಲಿತ ಸ್ವಾಮೀಜಿಯೊಬ್ಬರು ತಿಂದ ಆಹಾರವನ್ನು ಸ್ವಾಮೀಜಿ ಬಾಯಿಯಿಂದ ತೆಗೆಸಿ ಶಾಸಕ ಜಮೀರ್ ಅಹಮದ್ ಖಾನ್ ತಿಂದಿದ್ದಾರೆ.

ಇಂದು ಬೆಂಗಳೂರಿನ ಪಾದರಾಯನಪುರದ ಶಾಲೆಯಲ್ಲಿ ನಡೆದ ಭಾವೈಕ್ಯತೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಕಾರ್ಯಕ್ರಮದಲ್ಲಿ ಧರ್ಮ ಸಾಮರಸ್ಯದ ಬಗ್ಗೆ ಭಾವಾವೇಶದಿಂದ ಮಾತನಾಡುತ್ತಿದ್ದ ಚಾಮರಾಜಪೇಟೆ ಶಾಸಕ ಬಿ.ಝೆಡ್. ಜಮೀರ್ ಅಹಮದ್ ಖಾನ್ ಮಾತಿನ ಮಧ್ಯೆ ವೇದಿಕೆಯಲ್ಲಿ ಪಕ್ಕದಲ್ಲೇ ಕುಳಿತಿದ್ದ ದಲಿತ ಸ್ವಾಮೀಜಿಗೆ ಆಹಾರ ತಿನ್ನಿಸಿದ್ದಾರೆ.

ಆ ಬಳಿಕ ಶಾಸಕ ಜಮೀರ್ ಅಹಮದ್ ಗೆ ತಟ್ಟೆಯಲ್ಲಿದ್ದ ಆಹಾರವನ್ನು ತಿನ್ನಿಸಲು ಸ್ವಾಮೀಜಿ ಮುಂದಾದಾಗ ಸ್ವಾಮೀಜಿಯನ್ನು ತಡೆದು ನಿಮ್ಮ ಬಾಯಲ್ಲಿರುವುದನ್ನೇ‌ ತಿನ್ನಿಸಿ ಎಂದ ಜಮೀರ್ ಅಹಮದ್, ಸ್ವಾಮೀಜಿಯ ಬಾಯಿಯಿಂದಲೇ ತುತ್ತು ವಾಪಸ್ ಪಡೆದು ತಿಂದಿದ್ದಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪಾದರಾಯನಪುರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲನ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

- Advertisement -

Latest News

error: Content is protected !!