Tuesday, March 21, 2023
Homeಇತರಮರೆಯಾದ ಕಬಡ್ಡಿ ಕ್ಷೇತ್ರದ ಮಾಣಿಕ್ಯ : ಉದಯ್ ಚೌಟ ಅವರಿಗೆ ಸಂದಿತ್ತು ಹತ್ತು ಹಲವಾರು ಗೌರವ

ಮರೆಯಾದ ಕಬಡ್ಡಿ ಕ್ಷೇತ್ರದ ಮಾಣಿಕ್ಯ : ಉದಯ್ ಚೌಟ ಅವರಿಗೆ ಸಂದಿತ್ತು ಹತ್ತು ಹಲವಾರು ಗೌರವ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಏಕಲವ್ಯ ಪ್ರಶಸ್ತಿ ಪುರಸ್ಕೃತ, ಖ್ಯಾತ ಕಬಡ್ಡಿ ಆಟಗಾರ ದಿ. ಉದಯ ಚೌಟ ಅವರು ಬಂಟ್ವಾಳ ತಾಲೂಕಿನ ಮಾಣಿ ಮೂಲದವರು.

ಮಾಣಿ ಬದಿಗುಡ್ಡೆಯ ವೆಂಕಪ್ಪ ಚೌಟ ಹಾಗೂ ಬೇಬಿ ದಂಪತಿಯ ಪುತ್ರರಾಗಿದ್ದ ಅವರು ದೇಶದ ಪ್ರಮುಖ ಕಬಡ್ಡಿ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರಿಗೆ ಈ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದ್ದು, ಒಂದು ತಿಂಗಳ ಹಿಂದೆ ಶ್ರೀನಿಧಿ ಆಸ್ರಣ್ಣ ಪ್ರಶಸ್ತಿಯನ್ನು ಪಡೆದಿದ್ದರು

ಮಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸರಕಾರಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಅವರು ವಿದ್ಯಾರ್ಥಿದಿಸೆಯಿಂದಲೂ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ನಾಲ್ಕು ವರ್ಷ ಅಂತರ್ ಕಾಲೇಜ್ ಕಬಡ್ಡಿ ಪದ್ಯಾಂಟದಲ್ಲಿ ಜಯಗಳಿಸಿದ್ದ ಅವರು ಅಂತರ್ ವಿಶ್ವವಿದ್ಯಾಲಯಕ್ಕೆ ದಕ್ಷಿಣ ವಲಯದಿಂದ ಮಂಗಳೂರು ವಿವಿಯನ್ನು ಮೂರು ವರ್ಷ ಪ್ರತಿನಿಧಿಸಿದ್ದು, 2000 ದಿಂದ 2008 ರವರೆಗೆ ರಾಷ್ರೀಯ ತಂಡದಲ್ಲಿದ್ದರು.  

2007ರ ದ್ವಿತೀಯ ವಿಶ್ವ ಕಪ್ ಕಬ್ಬಡಿ ಪದ್ಯಾಂಟದಲ್ಲಿ ಗೆಲುವನ್ನು ಸಾಧಿಸಿದ ತಂಡದಲ್ಲಿದ್ದ ಅವರು ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಸುರತ್ಕಲ್ ನಲ್ಲಿರುವ ಪುಸ್ತಕ ಬ್ಯಾಂಕ್ ಆಫ್ ಬರೋಡದ ಕಛೇರಿಯಲ್ಲಿ ಉಪ ಪ್ರಬಂಧಕರಾಗಿದ್ದ ಉದಯ ಚೌಟ ಕ್ರೀಡಾ ಕೋಟದಲ್ಲಿ 8 ತಿಂಗಳ ಕಾಲ ಏರ್ ಇಂಡಿಯಾ ಮತ್ತು 10 ತಿಂಗಳ ಕಾಲ ಕೆಪಿಟಿಸಿಎಲ್ ನಲ್ಲಿ ಉದ್ಯೋಗದಲ್ಲಿದ್ದರು. 

ಕಬಡ್ಡಿಯಲ್ಲಿ ಅವರ ಸಾಧನೆ: ಬಿಹಾರದ ದರ್ಭಾಂಗದಲ್ಲಿ ನಡೆದ 50ನೇ ಸೀನಿಯರ್ ರಾಷ್ಟ್ರೀಯ ಕಬಡ್ಡಿಯಲ್ಲಿ ಚಾಂಪಿಯನ್ ಶಿಪ್, ಮಂಗಳೂರಿನಲ್ಲಿ ನಡೆದ 18ನೇ ಫೆಡರೇಷನ್ ಕಪ್ ಕಬಡ್ಡಿ ಚಾಂಪಿಯನ್ ಶಿಪ್, ಮಹಾರಾಷ್ಟ್ರದಲ್ಲಿ ನಡೆದ 2ನೇ ವಿಶ್ವಕಪ್ ಕಬಡ್ಡಿಯಲ್ಲಿ ಅವರು ಭಾಗವಹಿಸಿದ್ದರು.

2004 ರಲ್ಲಿ ಭಾರತ-ಬಾಂಗ್ಲಾ ಟೆಸ್ಟ್ ಕಬಡ್ಡಿ ಪಂದ್ಯಾಟದಲ್ಲಿ 5ಪಂದ್ಯಗಳನ್ನು ಜಯಿಸಿ ಚಿನ್ನದ ಪದಕವನ್ನು ಪಡೆದಿದ್ದರು. ಕ್ರೀಡೆಯಿಂದ ಅತ್ಯುತ್ತಮ ಸಾಧನೆಗೆ ಕರ್ನಾಟಕ ಸರಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಪಡೆದ ಹೆಗ್ಗಳಿಕೆ ಉದಯ ಚೌಟ ಅವರದ್ದು. 20  ವರ್ಷಗಳ ಅವರ ಕಬಡ್ಡಿ ಜೀವನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 100ಕ್ಕೂ ಅಧಿಕ, ರಾಜ್ಯಮಟ್ಟದಲ್ಲಿ 300ಕ್ಕೂ ಅಧಿಕ ಪಂದ್ಯಾಟಗಳನ್ನು ಆಡಿದ್ದಾರೆ.

 

ಮಾಣಿಯಲ್ಲಿನ ಅವರ ಹಿರಿಮೆಯ ಕುರಿತು ಹರೀಶ್ ಮಂಜೊಟ್ಟಿ ಅವರ ಮಾತುಗಳು:  ಮಾಣಿ ಎಂದರೆ ಅದು ಕಬಡ್ಡಿಯ ಮಣ್ಣು. ಕಬಡ್ಡಿಯ ಇತಿಹಾಸದಲ್ಲಿ ಮಾಣಿ ಅದೇಷ್ಟೊ ಕಬಡ್ಡಿ ಪಟುಗಳನ್ನು ಕ್ರೀಡಾರಂಗಕ್ಕೆ ನೀಡಿ ಮೆರೆಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಣಿಯನ್ನು ಕಬಡ್ಡಿಯಲ್ಲಿ  ಗುರುತಿಸಿದ ಕೀರ್ತಿ ಉದಯ ಚೌಟ ಅವರದ್ದು. (ಅಥ್ಲೆಟಿಕ್ ನಲ್ಲಿ ಆನಂದ ಶೆಟ್ಟಿ ಹೆಸರು). ಉದಯಣ್ಣನದು ಎಲ್ಲಾ ಕಿರಿಯ ಆಟಗಾರರನ್ನು ಸದಾ ಬೆಂಬಲಿಸುವ, ಪ್ರೋತ್ಸಾಹಿಸುವ ದೊಡ್ಡ ಗುಣವೇ ಈ ಮಟ್ಟಕ್ಕೆರಿಸಿದೆ ಅಂದರೆ ತಪ್ಪಾಗಲಾರದು. ಬ್ಯಾಂಕ್ ತಂಡದ ಖಾಯಂ ಆಟಗಾರರಾಗಿದ್ದ ಅವರು ಆಲ್ ರೌಂಡರ್ ಪ್ರದರ್ಶನ ನೋಡುವುದೆ ಸೊಗಸಾಗಿತ್ತು. ಕಬಡ್ಡಿಯ ಬಗೆಗೆ ಎಲ್ಲಾ ಆಳ ಅರಿತಿದ್ದ ಚೌಟರು ಅತ್ತ್ಯುತ್ತಮ ತರಭೇತುದಾರ ಕೂಡಾ ಆಗಿದ್ದರು. ಕಬಡ್ಡಿಯ ಬಗೆಗೆ ಗಂಟೆಗಟ್ಟಲೆ ಮಾತಾಡಬಲ್ಲ ವಾಗ್ಮಿಯೂ ಹೌದು. ನನ್ನ ಕಾಲೇಜು ದಿನಗಳಲ್ಲಿ ಅಲ್ಪಸ್ವಲ್ಪ ಕಬಡ್ಡಿ ಆಡುತ್ತಿದ್ದಾಗ ಬಂದು ಒಂದೊಂದು ಗಂಟೆ ಕಬಡ್ಡಿ ಯ ಬಗ್ಗೆ ವಿವರಿಸುತ್ತಿದ್ದ ರೀತಿ ಅದ್ಬುತವಾಗಿತ್ತು.

- Advertisement -
spot_img

Latest News

error: Content is protected !!