Thursday, June 4, 2026
Homeಕರಾವಳಿಉಡುಪಿಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂದು ಮೋಹನ್ ಭಾಗವತ್ ಹೇಳಿರುವುದು ಈಗ ಇರುವುದ‌ನ್ನು ಸರಿ ಮಾಡಿಕೊಳ್ಳೋಣ...

ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂದು ಮೋಹನ್ ಭಾಗವತ್ ಹೇಳಿರುವುದು ಈಗ ಇರುವುದ‌ನ್ನು ಸರಿ ಮಾಡಿಕೊಳ್ಳೋಣ ಎಂದರ್ಥ: ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಹೇಳಿಕೆ

- Advertisement -
- Advertisement -

ಉಡುಪಿ: ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ಕೊಟ್ಟಿರುವುದನ್ನು ಖಂಡಿತವಾಗಿ ಎಲ್ಲರೂ ಕೇಳುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಹೇಳಿಕೆ ನೀಡಿದ ರಘುಪತಿ ಭಟ್,
ಈಗ ಇರುವುದನ್ನು ಸರಿ ಮಾಡಿಕೊಳ್ಳೋಣ ಎಂಬುದು ಅದರ ಅರ್ಥ ಎಂದಿದ್ದಾರೆ.

ಅಲ್ಲದೇ, ಕೆಲವು ಕುರುಹುಗಳು ಸಿಕ್ಕಾಗ ಭಾವನೆಗೆ ಧಕ್ಕೆ ಆಗುತ್ತದೆ,‌
ನಮ್ಮ ಮೂಲಸ್ಥಾನಕ್ಕಾಗಿ ಹುಡುಕಿಕೊಂಡು ಹೋಗಿ ಜೀರ್ಣೋದ್ಧಾರ ಮಾಡುತ್ತೇವೆ, ಸೌಹಾರ್ದತೆ ಇರಬೇಕೆಂದು ಭಾಗವತ್ ಭಾಷಣದಲ್ಲಿ ಮಾತನಾಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥರು ಕರೆ ಕೊಟ್ಟಿದ್ದು, ಜನರು ಭಾವನಾತ್ಮಕವಾಗಿ ಹೋರಾಟ ಮಾಡುತ್ತಿದ್ದಾರೆ, ಸಾಕ್ಷಿಗಳು ಸಿಕ್ಕಲ್ಲಿ ಹೋರಾಟ ಅಗಿಯೇ ಆಗುತ್ತದೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

- Advertisement -

Latest News

error: Content is protected !!