Wednesday, April 24, 2024
Homeಕರಾವಳಿಉಡುಪಿಅಂಬೇಡ್ಕರ್ ಗೆ ದ್ರೋಹ ಮಾಡುವಾಗ ಕಾಂಗ್ರೆಸ್ ಎಲ್ಲಿತ್ತು ? : ಶಾಸಕ ಪ್ರಿಯಾಂಕ್ ಖರ್ಗೆಗೆ ಸಚಿವ...

ಅಂಬೇಡ್ಕರ್ ಗೆ ದ್ರೋಹ ಮಾಡುವಾಗ ಕಾಂಗ್ರೆಸ್ ಎಲ್ಲಿತ್ತು ? : ಶಾಸಕ ಪ್ರಿಯಾಂಕ್ ಖರ್ಗೆಗೆ ಸಚಿವ ಸುನೀಲ್ ಕುಮಾರ್ ಪ್ರಶ್ನೆ

spot_img
- Advertisement -
- Advertisement -

ಬೆಂಗಳೂರು: ಸಂವಿಧಾನದ ಆಶಯಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಮೀಸಲು ಕ್ಷೇತ್ರವನ್ನು ಸಾಮಾನ್ಯ ದಲಿತನಿಗೆ ಬಿಟ್ಟುಕೊಟ್ಟು ಗೆಲ್ಲಿಸುವ ಬದ್ಧತೆ ಹೊಂದಿದ್ದಾರೆಯೇ ಎಂದು ಕನ್ನಡ,ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

ನಿಜವಾದ ದಲಿತನ ನೋವು- ನಲಿವುಗಳನ್ನು ಪ್ರಿಯಾಂಕ್ ಖರ್ಗೆ ಅರ್ಥ ಮಾಡಿಕೊಂಡಿಲ್ಲ. ಬೆಂಗಳೂರಿನಲ್ಲಿ ಹುಟ್ಟಿ- ಬೆಳೆದ ” ಕಾನ್ವೆಂಟ್ ರಾಜಕಾರಣಿ “. ಬದುಕಿನಲ್ಲಿ ನೀವು ದಲಿತರಿಗೆ ಕೊಟ್ಟ ಆದ್ಯತೆ ಏನು ? ಎಂಬುದರ ಬಗ್ಗೆ ತುಸು ಆತ್ಮಾವಲೋಕನ ಮಾಡಿಕೊಳ್ಳಿ. ದಲಿತ ಎನ್ನುವ ಪದ ಖರ್ಗೆ ಕುಟುಂಬಕ್ಜೆ ರಾಜಕೀಯ ಅಧಿಕಾರವನ್ನು ಕಾಪಿಟ್ಟುಕೊಳ್ಳುವುದಕ್ಕೆ ಬೇಕಾದ ಅಸ್ತ್ರವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ ಖರ್ಗೆ ಮೀಸಲು ಕ್ಷೇತ್ರಗಳನ್ನು ತಮ್ಮ ವೈಯಕ್ತಿಕ ಜಹಗೀರಿನಂತೆ ಬಳಸಿಕೊಂಡಿದ್ದಾರೆ. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆಯ ಸಿದ್ಧಾಂತದಲ್ಲಿ ನಿಮಗೆ ನಿಜಕ್ಕೂ ನಂಬಿಕೆ ಇದ್ದಿದ್ದರೆ ಮೀಸಲು ಕ್ಷೇತ್ರವನ್ನು ಒಬ್ಬ ಸಾಮಾನ್ಯ ದಲಿತನಿಗೆ ಬಿಟ್ಟುಕೊಟ್ಟು ಅವರನ್ನು ಗೆಲ್ಲಿಸುವ ಬದ್ಧತೆಯನ್ನು ತೋರಬೇಕಿತ್ತು. ಆದರೆ ಖರ್ಗೆ ಕುಟುಂಬ ಈ ಉದಾರತೆಯನ್ನು ಎಂದೂ ತೋರಿಲ್ಲ. ನಿಮಗೆ ನಿಜಕ್ಕೂ ದಲಿತಪರ ಕಾಳಜಿ ಇದ್ದರೆ ಮುಂದಿನ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭೆ ಹಾಗೂ ಚಿತ್ತಾಪುರ ವಿಧಾನಸಭಾ ಕ್ಷೇತ್ರವನ್ನು ಸಾಮಾನ್ಯ ದಲಿತನಿಗೆ ಬಿಟ್ಟುಕೊಡಲಿ ಎಂದು ಸವಾಲು ಹಾಕಿದ್ದಾರೆ.

ತಮ್ಮ ಯೋಗ್ಯತೆಗೆ ಮೀರಿದ ಮಾತುಗಳನ್ನು ಆಡುವುದು ಪ್ರಿಯಾಂಕ್ ಖರ್ಗೆಯವರಿಗೆ ಒಂದು ಚಟವಾಗಿ ಬಿಟ್ಟಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಮೇಲ್ಲಿಂದ ಮೇಲೆ ಹಗುರವಾಗಿ ಮಾತನಾಡುತ್ತಿದ್ದಾರೆ. ಹೆಸರಿನಲ್ಲೇ ನೆಹರು- ಗಾಂಧಿ ಕುಟುಂಬದ ಊಳಿಗತನವನ್ನು ಮೈಗೂಡಿಸಿಕೊಂಡಿರುವ ನಿಮಗೆ ಸ್ವಾಭಿಮಾನದ ವಿಚಾರಗಳು ಅರ್ಥವಾಗುವುದಿಲ್ಲ. ಸಿಎಂ ಬೊಮ್ಮಾಯಿ ಅವರ ಮೌನವನ್ನು ನಿಂದಿಸುವ ಬದಲು ನಿಮ್ಮ ವಾಚಾಳಿತನವನ್ನು ತುಸು ಕಡಿಮೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.


ಆರ್ ಎಸ್ ಎಸ್ ಎಲ್ಲಿತ್ತು ? ಸಂಘ -ಪರಿವಾರದವರು ಎಲ್ಲಿದ್ದರು ಎಂಬಿತ್ಯಾದಿಯಾಗಿ ಉಡಾಫೆ ಮಾತನಾಡುವುದಕ್ಕೆ ಮುನ್ನ ಇತಿಹಾಸವನ್ನು ತುಸು ಓದಿ ಸತ್ಯ ತಿಳಿದುಕೊಳ್ಳಿ. ಅಂಬೇಡ್ಕರ್ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವಾಗ ಕಾಂಗ್ರೆಸ್ ಎಲ್ಲಿತ್ತು ?  ಲೋಕಸಭಾ ಚುನಾವಣೆಯಲ್ಲಿ ಅವರನ್ನು  ಸೋಲಿಸುವಾಗ ಕಾಂಗ್ರೆಸ್ ಎಲ್ಲಿತ್ತು ? ಅಂಬೇಡ್ಕರ್ ಮರಣ ಹೊಂದಿದಾಗ ಅವರ ಶವ ಸಂಸ್ಕಾರಕ್ಕೂ ದಿಲ್ಲಿಯಲ್ಲಿ ಜಾಗ ಕೊಡದೆ ಅವಮಾನಿಸುವಾಗ ಕಾಂಗ್ರೆಸ್ ಎಲ್ಲಿತ್ತು ? ಎಂಬಿತ್ಯಾದಿ ಮೂಲಭೂತ ಪ್ರಶ್ನೆಗಳಿಗೆ ಮೊದಲು ಉತ್ತರ ಹುಡುಕಿ. ಆ ಬಳಿಕ ಸಂಘ- ಪರಿವಾರದ ಬಗ್ಗೆ ಪ್ರಶ್ನೆ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.

- Advertisement -
spot_img

Latest News

error: Content is protected !!