Tuesday, June 23, 2026
Homeಕರಾವಳಿಬೆಳಗ್ಗೆ 5 ಗಂಟೆಗೆ ಕುಮಾರ ಪರ್ವತ ಚಾರಣಕ್ಕೆ ಅನುಮತಿ ನೀಡುವಂತೆ ವಿಧಾನಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ...

ಬೆಳಗ್ಗೆ 5 ಗಂಟೆಗೆ ಕುಮಾರ ಪರ್ವತ ಚಾರಣಕ್ಕೆ ಅನುಮತಿ ನೀಡುವಂತೆ ವಿಧಾನಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಒತ್ತಾಯ

- Advertisement -
- Advertisement -

ಬೆಂಗಳೂರು: ಕುಕ್ಕೆ ಸುಬ್ರಮಣ್ಯದಲ್ಲಿ ಕುಮಾರ ಪರ್ವತ ಚಾರಣವನ್ನು ಬೆಳಗ್ಗೆ 5 ಗಂಟೆಗೆ ಆರಂಭಿಸಲು ಅನುಮತಿ ನೀಡುವಂತೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ ಭಾಗೀರಥಿ ಮುರುಳ್ಯ, ಕುಕ್ಕೆ ಸುಬ್ರಮಣ್ಯದಲ್ಲಿ ಬೆಳಗ್ಗೆ 5 ಗಂಟೆಯ ಬದಲಾಗಿ 6 ಗಂಟೆಗೆ ಬಿಡಲಾಗುತ್ತಿದ್ದು, ಇದರಿಂದ ತಲುಪಲು ಸಮಯದಲ್ಲಿ ವ್ಯತ್ಯಾಸವಾಗುತ್ತಿರುವುದಲ್ಲದೇ ಶೇಷಗಿರಿ ಪರ್ವತಕ್ಕೆ ಹೋಗಲು ಬಿಡುತ್ತಿಲ್ಲ, ಹಾಗಾಗಿ ಮೊದಲಿನಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.ಶಾಸಕರ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ಕುಮಾರ ಪರ್ವತಕ್ಕೆ ಹೋಗುವ ಪ್ರವಾಸಿಗರು ಅಲ್ಲಿ ವಾಸ್ತವ್ಯ ಮಾಡುತ್ತಿದ್ದ ಕಾರಣ ರಕ್ಷಣೆಗೆ ಸಮಸ್ಯೆ ಇತ್ತು, ಕಾಡು ಪ್ರಾಣಿಗಳು ಇರುವುದರಿಂದ ಸಮಯ ಬದಲಾವಣೆ ಮಾಡಲಾಗಿದೆ, ಸಮಸ್ಯೆ ಆಗಬಾರದು ಅಂತ ಬೇಕು ಅಂತಲೇ ತಡೆದಿದ್ದೇವೆ ಎಂದು ಹೇಳಿದ್ದಾರೆ.ಇದೇ ವೇಳೆ, ಬೆಳಗ್ಗೆ ಹತ್ತು ಗಂಟೆ ನಂತರವೂ ಚಾರಣಕ್ಕೆ ಹೋಗುವವರಿಗೂ ಅವಕಾಶ ಮಾಡಿಕೊಡುವಂತೆ ಶಾಸಕಿ ಭಾಗೀರಥಿ ಮುರುಳ್ಯ ಸದನದಲ್ಲಿ ಅರಣ್ಯ ಸಚಿವರಿಗೆ ಮನವಿ ಮಾಡಿದರು.

- Advertisement -

Latest News

error: Content is protected !!