Saturday, June 27, 2026
Homeಕರಾವಳಿಉಡುಪಿಸ್ಕೂಟಿಗೆ ಢಿಕ್ಕಿ ಹೊಡೆದ ಕಾರು; ಕಾರು ಚಾಲಕನಿಂದ ದ್ವಿಚಕ್ರ ಸವಾರನ ಪತ್ನಿಯ ಮೇಲೆ ಹಲ್ಲೆ

ಸ್ಕೂಟಿಗೆ ಢಿಕ್ಕಿ ಹೊಡೆದ ಕಾರು; ಕಾರು ಚಾಲಕನಿಂದ ದ್ವಿಚಕ್ರ ಸವಾರನ ಪತ್ನಿಯ ಮೇಲೆ ಹಲ್ಲೆ

- Advertisement -
- Advertisement -

ಉಡುಪಿ: ಇಲ್ಲಿನ ಚಿತ್ತರಂಜನ್ ಸರ್ಕಲ್‌ ತೆರಳುವ ರಸ್ತೆಯಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು ಚಾಲಕನೊಬ್ಬ ಸ್ಕೂಟಿ ಸವಾರನಿಗೆ ಹಲ್ಲೆ ನಡೆಸಿದ್ದಲ್ಲದೇ ಆತನ ಪತ್ನಿಯ ಮೇಲೂ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕಾರೊಂದು ವೇಗವಾಗಿ ಬಂದು ಸ್ಕೂಟಿಗೆ ಢಿಕ್ಕಿ ಹೊಡೆದಿದ್ದು, ಸ್ಕೂಟಿ ಸವಾರ ಹಾಗೂ ಆತನ‌ ಪತ್ನಿ ಕೆಳಗಡೆ ಬಿದ್ದಿದ್ದಾರೆ. ಇನ್ನು ಕಾರು ಚಾಲಕ ಅಪಘಾತದಲ್ಲಿರುವವರಿಗೆ ಸಹಾಯ ಮಾಡುವ ಬದಲು ಏಕಾಏಕಿ ನುಗ್ಗಿ ಬಂದು ಸ್ಕೂಟಿ ಚಾಲಯಿಸುತ್ತಿದ್ದ ವ್ಯಕ್ತಿಗೆ ಕಾರು ಚಾಲಕ ಹಲ್ಲೆ ನಡೆಸಿದ್ದಲ್ಲದೇ, ಆತನ ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾನೆ..

ಈ ವೇಳೆಯಲ್ಲಿ ಸ್ಕೂಟಿ ಸವಾರನ ಪತ್ನಿ ಘಟನೆಯ ವಿಡಿಯೋ ಮಾಡಲು ಮುಂದಾದಾಗ ಮಹಿಳೆಯ ಮೇಲೂ ಹಲ್ಲೆ ನಡೆಸಿ ಕಾರು ಹತ್ತಿ ಪರಾರಿಯಾಗಲು ಯತ್ನಿಸಿದ್ದಾನೆ. ಅಪಘಾತಕ್ಕೀಡಾದ ಮಹಿಳೆ ಕಾರಿಗೆ ಅಡ್ಡ ನಿಂತು ಪ್ರತಿರೋಧ ವ್ಯಕ್ತಪಡಿಸಿದ್ದು,ತಕ್ಷಣ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳಕ್ಕೆ ಅಗಮಿಸಿದ ನಗರ ಪೊಲೀಸ್ ಠಾಣಾ ಅಧಿಕಾರಿಗಳು ಕಾರು ಚಾಲಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.

- Advertisement -

Latest News

error: Content is protected !!