Thursday, June 4, 2026
Homeಕರಾವಳಿಮಂಗಳೂರುಕಡಬ: ತೋಟಕ್ಕೆ ನುಗ್ಗಿದ ಜಾನುವಾರಗಳನ್ನು ಓಡಿಸಲು ಹೋಗಿ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವು

ಕಡಬ: ತೋಟಕ್ಕೆ ನುಗ್ಗಿದ ಜಾನುವಾರಗಳನ್ನು ಓಡಿಸಲು ಹೋಗಿ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವು

- Advertisement -
- Advertisement -

ಕಡಬ: ತೋಟಕ್ಕೆ ನುಗ್ಗಿದ ಜಾನುವಾರಗಳನ್ನು ಓಡಿಸಲು ಹೋಗಿ ಆಕಸ್ಮಿಕವಾಗಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದ ಪಾತೃವಾಡಿಯಲ್ಲಿ ನಡೆದಿದೆ. ಕೊಣಾಲು ಗ್ರಾಮದ ನಿವಾಸಿ ಲೀಲಾವತಿ ಶೆಟ್ಟಿ(64) ಮೃತ ಮಹಿಳೆ.

ಮೃತ ಲೀಲಾವತಿ ಅವರ ಪುತ್ರ ಹರೀಶ್ ಅವರು ಲಾರಿ ಚಾಲಕರಾಗಿದ್ದು, ಮಾರ್ಚ್ 11ರಂದು ರಾತ್ರಿ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಆದರೆ ತಾಯಿ ಮನೆಯಲ್ಲಿ ಇರಲಿಲ್ಲ. ಗಾಬರಿಗೊಂಡ ಹರೀಶ್ ಅವರು ನೆರೆಮನೆಯವರ ಸಹಾಯದೊಂದಿಗೆ ಹುಡುಕಾಟ ನಡೆಸಿದಾಗ, ತೋಟದಲ್ಲಿ ಲೀಲಾವತಿ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತದೇಹ ಪತ್ತೆಯಾದಾಗ ಅವರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಇತ್ತು ಎನ್ನಲಾಗಿದೆ. ಮಾ. 11ರಂದು ಸಂಜೆ ತೋಟಕ್ಕೆ ನುಗ್ಗಿದ ಜಾನುವಾರುಗಳನ್ನು ಓಡಿಸಲು ಹೋದ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ. ಈ ವೇಳೆ ಕೈಯಲ್ಲಿದ್ದ ಕಲ್ಲೇ ಅವರ ಹಣೆಗೆ ಬಲವಾಗಿ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಅವರು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Latest News

error: Content is protected !!