Sunday, June 7, 2026
Homeಕರಾವಳಿದೇವಸ್ಥಾನದ ಎದುರು ಬಾಗಿನ ಅರ್ಪಿಸಿದ ಶಾಸಕ ಅಶೋಕ್ ರೈ; ಭಕ್ತ ಸಮೂಹದಿಂದ ಪುಣ್ಯಸ್ನಾನಕ್ಕೆ ಕ್ಷಣಗಣನೆ..!

ದೇವಸ್ಥಾನದ ಎದುರು ಬಾಗಿನ ಅರ್ಪಿಸಿದ ಶಾಸಕ ಅಶೋಕ್ ರೈ; ಭಕ್ತ ಸಮೂಹದಿಂದ ಪುಣ್ಯಸ್ನಾನಕ್ಕೆ ಕ್ಷಣಗಣನೆ..!

- Advertisement -
- Advertisement -

ಉಪ್ಪಿನಂಗಡಿ : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಸಹಸ್ರಲಿಂಗೇಶ್ವರ ದೇವಸ್ಥಾನ ಎದುರು ಬಾಗಿನ ಅರ್ಪಿಸಿದರು.

ಜಿಲ್ಲೆಯಾದ್ಯಂತ ಭಾರಿ ಮಳೆ ಎಡೆಬಿಡದೆ ಸುರಿಯುತ್ತಿದ್ದು, ನೇತ್ರಾವತಿ ನೀರು ಏರಿಕೆಯಾಗಿ ಸಹಸ್ರಲಿಂಗೇಶ್ವರ ದೇವಸ್ಥಾನದ ಎದುರಿಗೆ ಬಂದಿದೆ. ಕುಮಾರಧಾರ ನದಿಯ ನೀರು ಇನ್ನು ಸ್ವಲ್ಪ ಏರಿಕೆಯಾದರೆ, ಉಪ್ಪಿನಂಗಡಿಯಲ್ಲಿ ಸಂಗಮ ನಡೆಯುತ್ತದೆ.

ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾರಧಾರ ನದಿಗಳ ನೀರು ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ಬಂದು ಧ್ವಜಸ್ತಂಭಕ್ಕೆ ಸುತ್ತು ಹೊಡೆದಾಗ ಸಂಗಮ ಆಗುವುದೆಂದು ಭಕ್ತರ ನಂಬಿಕೆ. ಸಂಗಮ ನಡೆದಾಗ ದೇವರಿಗೆ ವಿಶೇಷ ಪೂಜೆ , ಬಾಗಿನ ಅರ್ಪಿಸುವ ಪದ್ಧತಿ ಈ ಹಿಂದಿನಿಂದಲೂ ವಾಡಿಕೆಯಲ್ಲಿದೆ. ಸಾವಿರಾರು ಭಕ್ತರು ಸಂಗಮದ ಕ್ಷಣಕ್ಕಾಗಿ ಎದುರುನೋಡುತ್ತಿದ್ದಾರೆ.

- Advertisement -

Latest News

error: Content is protected !!