Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ; ಸವಣಾಲಿನ ಹೇರಾಜೆಯಲ್ಲಿ ಮನೆಯ ಮೇಲೆ ಬಿದ್ದ ಚಲಿಸುತ್ತಿದ್ದ ಕಾರು

ಬೆಳ್ತಂಗಡಿ; ಸವಣಾಲಿನ ಹೇರಾಜೆಯಲ್ಲಿ ಮನೆಯ ಮೇಲೆ ಬಿದ್ದ ಚಲಿಸುತ್ತಿದ್ದ ಕಾರು

- Advertisement -
- Advertisement -

ಬೆಳ್ತಂಗಡಿ; ಕಾರು ಮನೆಯ ಮೇಲೆ ಬಿದ್ದ ಘಟನೆ ಸವಣಾಲಿನ ಹೇರಾಜೆಯಲ್ಲಿ ನಡೆದಿದೆ.

ಹೇರಾಜೆಯ ರಘುರಾಮ್ ಗಾಂಭೀರ ಅವರ ಮನೆಯ ಮೇಲೆ ಸವಣಾಲು ರಸ್ತೆಯಲ್ಲಿ ಸಾಗುತ್ತಿದ್ದ ಕಾರು 20 ಅಡಿ ಆಳದಲ್ಲಿ ಇದ್ದ ಮನೆ ಮೇಲೆ ಬಿದ್ದಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮನೆಯ ಗೋಡೆಗೆ ಹಾನಿಯಾಗಿದ್ದು ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಅತಿ ವೇಗವೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಇನ್ನು ಇದೇ ವೇಳೆ ಈ ರಸ್ತೆಯಲ್ಲಿ ಸಾಕಷ್ಟು ಜನ ಹಾಲು ತೆಗೆದುಕೊಂಡು ಹೋಗುತ್ತಿರುತ್ತಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.

ಸದ್ಯ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -

Latest News

error: Content is protected !!