Thursday, June 4, 2026
Homeಕರಾವಳಿಮಂಗಳೂರಿನಿಂದ-ಬೆಂಗಳೂರು ತೆರಳುವವರು ಸಂಪಾಜೆ ಮಾರ್ಗದಲ್ಲಿ ತೆರಳಲು ಡಿಸಿ ಸೂಚನೆ 

ಮಂಗಳೂರಿನಿಂದ-ಬೆಂಗಳೂರು ತೆರಳುವವರು ಸಂಪಾಜೆ ಮಾರ್ಗದಲ್ಲಿ ತೆರಳಲು ಡಿಸಿ ಸೂಚನೆ 

- Advertisement -
- Advertisement -

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರದ ದೊಡ್ಡತಪ್ಪಲೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ಸಂಪಾಜೆ, ಮಡಿಕೇರಿ ಮಾರ್ಗವಾಗಿ ತೆರಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ‌. 

ಹಾಸನ ಜಿಲ್ಲೆಯ ಸಕಲೇಶಪುರ ಸಮೀಪದ ದೊಡ್ಡತಪ್ಪಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು, ಶಿರಾಡಿ ಘಾಟ್ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಶಿರಾಡಿ ಘಾಟ್ ಮಾರ್ಗದಲ್ಲಿ ಮುಂದಿನ ಸೂಚನೆಯವರೆಗೆ ಯಾರೂ ಹೋಗಬಾರದು ಎಂದು ಅವರು ತಿಳಿಸಿದ್ದಾರೆ.

ಮಾಣಿಯಿಂದ ಪುತ್ತೂರು ಹೋಗುವಲ್ಲಿ ಕೂಡ ಸಣ್ಣ ಪ್ರಮಾಣದ ಲ್ಲಿ ಮಣ್ಣು ಕುಸಿತ ಆಗಿದ್ದು, ತೆರವು ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

- Advertisement -

Latest News

error: Content is protected !!