Thursday, April 25, 2024
Homeಕ್ರೀಡೆಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೂತನ ದಾಖಲೆ ಬರೆದ ಭಾರತದ ಮಿಥಾಲಿ ರಾಜ್, ನಂಬರ್​ 1 ಸ್ಥಾನಕ್ಕೆ...

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೂತನ ದಾಖಲೆ ಬರೆದ ಭಾರತದ ಮಿಥಾಲಿ ರಾಜ್, ನಂಬರ್​ 1 ಸ್ಥಾನಕ್ಕೆ ಇನ್ನೊಂದೇ ಮೆಟ್ಟಿಲು

spot_img
- Advertisement -
- Advertisement -

ಜೋಹಾನ್ಸ್‍ಬರ್ಗ್: ಭಾರತದ ಏಕದಿನ ತಂಡದ ನಾಯಕಿಯಾಗಿರುವ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000 ರನ್ ಪೂರೈಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಭಾರತದ ಮೊದಲ ಇನಿಂಗ್ಸ್ ನ 28ನೇ ಓವರ್ ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಮಿಥಾಲಿ ಈ ಸಾಧನೆ ಮಾಡಿದರು. ಮಹಿಳಾ ಕ್ರಿಕೆಟಿಗರಲ್ಲಿ 10,000 ರನ್ ಗಳಿಸಿದ ಭಾರತದ ಮೊದಲ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ನಾಯಕಿ ಚಾರ್ಲೊಟ್​ ಎಡ್ವರ್ಡ್ಸ್​ ಮೊದಲಿಗರಾಗಿ ಈ ದಾಖಲೆ ಮಾಡಿದ್ದರು. ಸದ್ಯ 10,273 ರನ್​ಗಳೊಂದಿಗೆ ಅವರು ಅತಿಹೆಚ್ಚು ರನ್​​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 38ರ ಹರೆಯದ ಮಿಥಾಲಿ ರಾಜ್ ಎರಡನೇ ಸ್ಥಾನದಲ್ಲಿದ್ದಾರೆ.

“ಎಂತಹ ಚಾಂಪಿಯನ್ ಕ್ರಿಕೆಟ್ ಆಟಗಾರ್ತಿ! ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮಹಿಳೆ’ ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ಆದರೆ, ಹೊಸ ಮೈಲಿಗಲ್ಲು ತಲುಪಿದ ಮರು ಎಸೆತದಲ್ಲೇ ಮಿಥಾಲಿ ರಾಜ್ ಔಟಾಗಿ ಹೊರ ನಡೆದರು. ಮಿಥಾಲಿ ರಾಜ್ 50 ಎಸೆತಗಳಲ್ಲಿ 36 ರನ್ ಗಳಿಸಿದ್ದು, ಇದರಲ್ಲಿ ಐದು ಬೌಂಡರಿಗಳಿದ್ದವು.

ಮಿಥಾಲಿ ರಾಜ್ 10 ಟೆಸ್ಟ್ ಪಂದ್ಯಗಳಲ್ಲಿ 663 ರನ್ ಗಳಿಸಿದ್ದು, 214 ರನ್ ಅವರ ಬೆಸ್ಟ್ ಸ್ಕೋರ್ ಆಗಿದೆ. ಕ್ರಮವಾಗಿ 212 ಏಕದಿನ ಮತ್ತು 89 ಟಿ-20 ಅಂತರರಾಷ್ಟ್ರೀಯ ಪಂದ್ಯಗಳಿಂದ 6938 ಮತ್ತು 2364 ರನ್ ಗಳಿಸಿದ್ದಾರೆ.

- Advertisement -
spot_img

Latest News

error: Content is protected !!