Thursday, June 4, 2026
Homeತಾಜಾ ಸುದ್ದಿತುಮಕೂರಿನಲ್ಲಿ ಪತ್ತೆಯಾಯ್ತು ನಾಪತ್ತೆಯಾದ ಗಿಳಿ: ಹುಡುಕಿಕೊಟ್ಟವರಿಗೆ ಸಿಕ್ತು 75 ಸಾವಿರ ರೂಪಾಯಿ ಬಹುಮಾನ

ತುಮಕೂರಿನಲ್ಲಿ ಪತ್ತೆಯಾಯ್ತು ನಾಪತ್ತೆಯಾದ ಗಿಳಿ: ಹುಡುಕಿಕೊಟ್ಟವರಿಗೆ ಸಿಕ್ತು 75 ಸಾವಿರ ರೂಪಾಯಿ ಬಹುಮಾನ

- Advertisement -
- Advertisement -

ತುಮಕೂರು : ಇಲ್ಲಿನ ಜಯನಗರದ ನಿವಾಸಿಗಳಾದ ಅರ್ಜುನ್-ರಂಜನಾ ದಂಪತಿ ಕಳೆದ ಸುಮಾರು ಮೂರು ವರ್ಷದಿಂದ ಒಂದು ಕಪಲ್ ಗಿಣಿಗಳನ್ನು ಭದ್ರಾವತಿಯಲ್ಲಿ ಸಾಕುತ್ತಿದ್ದರು. ಕಳೆದ 25 ದಿನಗಳ ಹಿಂದೆ ತುಮಕೂರಿನ ಜಯನಗರಕ್ಕೆ ಶಿಫ್ಟ್ ಆಗಿದ್ದರು. ಜುಲೈ 16 ರಂದು ಮನೆಯ ಬಾಗಿಲು ತೆರೆದಾಗ ಗಂಡು ಗಿಣಿ ಹಾರಿಹೋಗಿದೆ. ಪುನಃ ವಾಪಸ್ ಬರಲೇ ಇಲ್ಲ. ಗಿಣಿಯೊಂದಿಗೆ ಈ ಕುಟುಂಬ ಅತ್ಯಂತ ಬಾಂಧ್ಯವದಿಂದ ಇದ್ದು ಕಾಣೆಯಾಗಿದ್ದ ಗಿಣಿಗಾಗಿ ಕಣ್ಣಿರಿಡುತ್ತಾ ದುಃಖದಲ್ಲಿ ಹುಡುಕಾಟ ನಡೆಸಿದ್ದರು.ಅಲ್ಲದೇ ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ ಕೂಡ ಘೋಷಿಸಿದ್ದರು. ಇದೀಗ ಗಿಳಿ ಪತ್ತೆಯಾಗಿದೆ.

ಮನೆಯಿಂದ ಕಾಣೆಯಾಗಿದ್ದ ಆಫ್ರಿಕನ್ ಗಿಣಿ ಕೊನೆಗೂ ತನ್ನ ಮಾಲೀಕರ ಕೈ ಸೇರಿದೆ, ಮೊದಲಿಗೆ 50 ಸಾವಿರ ಬಹುಮಾನ ಪ್ರಕಟಿಸಿದ್ದ ಮಾಲೀಕರು ಕಳೆದ ಎರಡು ದಿನಗಳಿಂದ ಬಹುಮಾನದ ಮೊತ್ತ ಏರಿಸಿ ಹುಡುಕಿ ಕೊಟ್ಟವರಿಗೆ 75 ಸಾವಿರ ಬಹುಮಾನ ನೀಡಿದ್ದಾರೆ.

- Advertisement -

Latest News

error: Content is protected !!