Sunday, June 7, 2026
Homeಕರಾವಳಿನಾಲ್ಕು ವರ್ಷಗಳಿಂದ ತಾನು ಯುವಕ ಎಂದು ವಿಟ್ಲದ ಯುವತಿಗೆ ವಂಚಿಸಿದ ಮುಂಗಳಮುಖಿ : ಒಂದೇ ದಿನದಲ್ಲಿ...

ನಾಲ್ಕು ವರ್ಷಗಳಿಂದ ತಾನು ಯುವಕ ಎಂದು ವಿಟ್ಲದ ಯುವತಿಗೆ ವಂಚಿಸಿದ ಮುಂಗಳಮುಖಿ : ಒಂದೇ ದಿನದಲ್ಲಿ ಪ್ರೀತಿ ಮುರಿದು ಬಿದ್ದದ್ದು ಹೇಗೆ?

- Advertisement -
- Advertisement -

ವಿಟ್ಲ; ನಾಲ್ಕು ವರ್ಷಗಳಿಂದ ತಾನು ಯುವಕ ಎಂದು ವಿಟ್ಲದ ಯುವತಿಗೆ ಮುಂಗಳಮುಖಿ ವಂಚಿಸಿದ ಘಟನೆ ನಡೆದಿದೆ. ತಾನು ಯುವಕ ಎಂದು ಗಂಡಿನ ಧ್ವನಿಯಲ್ಲಿ ಮಾತನಾಡಿ ಯುವತಿಗೆ ವಂಚಿಸಿದ ಮಂಗಳಮುಖಿ ಮೋಸ ಮಾಡಿದ್ದಾಳೆ,

ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನ ಮೋಡಿಗೆ ಬಿದ್ದ ಬಂಟ್ವಾಳದ ಯುವತಿ ಆತನ‌ ಜೊತೆ ಮಾತನಾಡುತ್ತಿದ್ದಳು. ಮಂಗಳಮುಖಿ ಜ್ಯೋತಿ ಎಂಬಾಕೆ ಪ್ರದೀಪ ಎಂಬ ಹೆಸರಿನಲ್ಲಿ ಸಿವಿಲ್ ಇಂಜಿನಿಯರ್ ಎಂದು ನಂಬಿಸಿ ಗಂಡಿನ ಧ್ವನಿಯಲ್ಲಿ ಮಾತನಾಡುತ್ತಿದ್ದಳು.

ಬರೋಬ್ಬರಿ ನಾಲ್ಕು ವರ್ಷಗಳಿಂದ ಚಾಟಿಂಗ್ ನಡೆಯುತ್ತಿದ್ದು ದಿನಾಲೂ ಮನೆಯಲ್ಲಿ ಹುಡುಗಿ ಮತ್ತು ಮನೆಯವರು ಆತನ ವಿಷಯದಿಂದ ಜಗಳ ಮಾಡಿಕೊಳ್ಳುತ್ತಿದ್ದರು. ಹುಡುಗಿಯ ಅಮ್ಮ ಇದರಿಂದ ನೊಂದು ಮಹಿಳಾ ನ್ಯಾಯವಾದಿಯೋರ್ವರ ಬಳಿ ಹೇಳಿದ್ದಾರೆ. ಈ ವೇಳೆ ಯುವತಿಗೆ ಕರೆ ಮಾಡುತ್ತಿದ್ದಾತನ ಜಾಡು ಹಿಡಿದು ಹೊರಟಾಗ ಅಸಲೀಯತ್ತ ಬಯಲಾಗಿದೆ.  ಆದು ಮಂಗಳಮುಖಿ ಎಂದು ಗೊತ್ತಾಗಿದೆ.

ಈ ಪ್ರಕರಣದ ಬಗ್ಗೆ ನ್ಯಾಯವಾದಿ ಶೈಲಜಾ ರಾಜೇಶ್‌ ವಿಟ್ಲ ಪೊಲೀಸರ ಗಮನಕ್ಕೆ ತಂದು ಪೊಲೀಸರ ಸಹಕಾರದಿಂದ ಪ್ರೇಮ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.

- Advertisement -

Latest News

error: Content is protected !!