Friday, June 5, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಶವವಾಗಿ ಪತ್ತೆ

ಉಪ್ಪಿನಂಗಡಿ; ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಶವವಾಗಿ ಪತ್ತೆ

- Advertisement -
- Advertisement -

ಉಪ್ಪಿನಂಗಡಿ; ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆಯಿದೆ. ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ (28) ಮೃತ ಯುವಕ.

ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿದೆ. ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಪ್ಪಿನಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!