Sunday, April 28, 2024
Homeಕರಾವಳಿಬೆಳ್ತಂಗಡಿಯಲ್ಲೊಂದು ಅಪರೂಪದ ಘಟನೆ: 26 ವರ್ಷದ ಹಿಂದೆ ಕಾಣೆಯಾಗಿದ್ದ ಮನೆಗೆ ವಾಪಾಸ್

ಬೆಳ್ತಂಗಡಿಯಲ್ಲೊಂದು ಅಪರೂಪದ ಘಟನೆ: 26 ವರ್ಷದ ಹಿಂದೆ ಕಾಣೆಯಾಗಿದ್ದ ಮನೆಗೆ ವಾಪಾಸ್

spot_img
- Advertisement -
- Advertisement -

ಬೆಳ್ತಂಗಡಿ: 26 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಇದೀಗ ಮನೆಗೆ ವಾಪಾಸ್ ಬಂದಿರುವ ಅಪರೂಪದ ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಕೊರಗಪ್ಪ ಪೂಜಾರಿಯವರ ಪುತ್ರ ಶಿವಪ್ಪ ಪೂಜಾರಿ ಮರಳಿ ಮನೆಗೆ ಬಂದವರು. 26 ವರ್ಷಗಳ ಹಿಂದೆ ಶಿವಪ್ಪ ಪೂಜಾರಿ ಕಾಣೆಯಾಗಿದ್ರು. ಎಲ್ಲಿ ಹುಡುಕಿದ್ದರೂ ಪತ್ತೆಯಾಗಿರಲಿಲ್ಲ. ಹೊಟೇಲ್‌ ಕೆಲಸಕ್ಕೆ ಸೇರಿದ್ದರು ಶಿವಪ್ಪ ಪೂಜಾರಿಯವರು ತಮ್ಮ 18ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ್ದರು. ಬಡತನದ ಸನ್ನಿವೇಶದಿಂದ ಮನೆ ಬಿಟ್ಟು ಹೋಗಿದ್ದ ಅವರು ಆರಂಭದಲ್ಲಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಈ ವೇಳೆ ಮನೆಯವರ ಸಂಪರ್ಕದಲ್ಲಿದ್ದರು. ಬಳಿಕ ಉದ್ಯೋಗ ಅರಸುತ್ತ ತರಿಕೆರೆ, ಮೈಸೂರು ಕಡೆಗಳಲ್ಲಿ ನೆಲೆ ಆದರೆ ಸುದೀರ್ಘ‌ ಸಮಯದ ಬಳಿಕ ಮಗ ಮರಳುತ್ತಾನೆ ಎಂಬ ನಿರೀಕ್ಷೆ ಮನೆ ಮಂದಿಯಲ್ಲಿರಲಿಲ್ಲ.

ಪ್ರಸ್ತುತ ಹೋಟೆಲ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿರೋದಗಿ ಶಿವಪ್ಪ ಅವರು ಹೇಳುತ್ತಿದ್ದು, ತರೀಕೆರೆಯ ಮೀನಾಕ್ಷಿ ಎಂಬವರನ್ನು ವಿವಾಹವಾಗಿರೋದಾಗಿ ಹೇಳಿದ್ದಾರೆ. ಅಲ್ಲದೇ ಇಬ್ಬರೂ ಮಕ್ಕಳಿದ್ದಾರೆ ಎಂದಿದ್ದಾರೆ.ಇನ್ನು ಲೌಕ್ ಡೌನ್ ನಿಂದಾಗಿ ಹೋಟೆಲ್ ಮುಚ್ಚಿದ್ದರಿಂದ ಶಿವಪ್ಪ ಅವರು ಬಂಟ್ವಾಳಕ್ಕೆ ಬಂದಿದ್ದರು. ಹೀಗೆ ಬದವರು ಬಂಟ್ವಾಳದ ಮಾರಿಪಳ್ಳ ಬಸ್ ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದರು. ಸ್ಥಳೀಯರು ಅವರನ್ನು ಉಪಚರಿಸಿದಾಗ ಅವರು ಬೆಳಾಲಿನಲ್ಲಿರುವ ತಮ್ಮ ಮನೆಯ ಬಗ್ಗೆ ತಿಳಿಸಿದ್ದಾರೆ.ತಕ್ಷಣ ಸ್ಥಳೀಯೊರೊಬ್ಬರು ವಾಟ್ಸಾಫ್ ನಲ್ಲಿ ಅವರ ವಿವರ ಹಾಕಿದ್ದಾರೆ. ಇದನ್ನು ಗಮನಿಸಿ ಬೆಳಾಲಿನ ಯುವಕರು ಮನೆಮಂದಿಯನ್ನು ಸಂಪರ್ಕಿಸಿದಾಗ ಕಾಣೆಯಾಗಿದ್ದ ವಿಚಾರ ಖಚಿತವಾಗಿತ್ತು.

ಬಳಿಕ ತಾರಿದಡಿ ಆದಂ, ಆದರ್ಶನಗರದ ಉಸ್ಮಾನ್‌, ಕಬೀರ್‌, ಫ‌ರಂಗಿಪೇಟೆಯ ಅಧ್ಯಾಪಕ ಮುಸ್ತಪ ಕೌಸರಿ ಅವರ ನೆರವಿನೊಂದಿಗೆ ಶಿವಪ್ಪರವರ ಓಡಿಪ್ರೊಟ್ಟು ಮನೆಯ ಸಹೋದರರು, ಸಂಬಂಧಿಕರು ಬಂಟ್ವಾಳಕ್ಕೆ ಹೋಗಿ ಮನೆಗೆ ಕರೆದುಕೊಂಡು ಬಂದಿದ್ದರು.

ಇದೀಗ ಕಳೆದ 26 ವರ್ಷಗಳ ಮನೆ ಮಗ ಮರಳಿರುವ ಸಂತೋಷದಲ್ಲಿ ಕುಟುಂಬವಿದ್ದು, ಇತ್ತ ಶಿವಪ್ಪ ಅವರು ಮನೆ ಮಂದಿಯೊಂದಿಗೆ ಸಂತೋಷವಾಗಿ ಸಮಯ ಕಳೆ ಯುತ್ತಿದ್ದಾರೆ. ಶಿವಪ್ಪ ಅವರ ತಂದೆ, ತಾಯಿ ಇಬ್ಬರೂ 3 ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಅವರಿಗೆ ಮೂವರು ಸಹೋದರರು, ಇಬ್ಬರು ಸಹೋದರಿಯರಿದ್ದು ಈಗ ಹಳೇ ಮನೆಯಲ್ಲಿ ಸಹೋದರನೊಂದಿಗೆ ವಾಸವಿದ್ದಾರೆ. ಕೋವಿಡ್ ಕಾರಣದಿಂದ ಇದೀಗ ಪ್ರತ್ಯೇಕವಾಗಿ ವಾಸವಿದ್ದಾರೆ.

- Advertisement -
spot_img

Latest News

error: Content is protected !!