Monday, April 29, 2024
Homeಕರಾವಳಿಉಳ್ಳಾಲ: ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದ ಹಿಂದು ಮಹಿಳೆ ಮಧ್ಯವಯಸ್ಕ ಮುಸ್ಲಿಂ ಪುರುಷನೊಂದಿಗೆ ಪತ್ತೆ..

ಉಳ್ಳಾಲ: ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದ ಹಿಂದು ಮಹಿಳೆ ಮಧ್ಯವಯಸ್ಕ ಮುಸ್ಲಿಂ ಪುರುಷನೊಂದಿಗೆ ಪತ್ತೆ..

spot_img
- Advertisement -
- Advertisement -

ಉಳ್ಳಾಲ: ಕಳೆದ ನಾಲ್ಕು ದಿನಗಳಿಂದ ಕೊಣಾಜೆ ಬಳಿಯ ಪಜೀರು ಗೋವನಿತಾಶ್ರಮದಿಂದ ಕಣ್ಮರೆಯಾಗಿದ್ದ ಎರಡು ಮಕ್ಕಳ ತಾಯಿ, ವಿಧವೆ ಮಹಿಳೆಯೊಬ್ಬಳು ಉಳ್ಳಾಲದಲ್ಲಿ ಮಧ್ಯವಯಸ್ಕ ಮುಸ್ಲಿಂ ಪುರುಷನೊಂದಿಗೆ ಪತ್ತೆಯಾಗಿರುವ ಘಟನೆ ಇಂದು ನಡೆದಿದೆ.

ಮಂಗಳೂರಿನ ಅಡ್ಯಾರ್ ಪದವು ಮೂಲದ ಮಹಿಳೆಯ ಗಂಡ ತೀರಿಹೋಗಿದ್ದು, ತನ್ನ ಎರಡು ಮಕ್ಕಳೊಂದಿಗೆ ವಾಸವಾಗಿದ್ದಳು. ಹಾಗೂ ಅದೇ ಪರಿಸರದ ನಿವಾಸಿ ಆಗಿರುವ ಶೌಕತ್ ಎಂಬಾತನ ಜೊತೆ ಈ ಹಿಂದೆ ಸಂಪರ್ಕದಲ್ಲಿದ್ದಳು. ಈ ಜೋಡಿಯ ಅಕ್ರಮ ಸಂಬಂಧ ಮತ್ತು ಲವ್ ಜಿಹಾದ್ ನ ಶಂಕೆಯಿಂದಾಗಿ ಮಹಿಳೆಗೆ ಅಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತರು ಅನೇಕ ಬಾರಿ ಬುದ್ದಿ ಹೇಳಿ, ಆತನ ಸಹವಾಸ ಒಳ್ಳೆಯದಲ್ಲ ಎಂದು ತಿಳಿಸಿದ್ದರು. ಆದರೆ ಈ ಮಹಿಳೆ ಶೌಕತ್ ನೊಂದಿಗೆ ಸಂಬಂಧವನ್ನು ಬಿಡಲು ಒಪ್ಪದಿದ್ದಾಗ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ವಿಶ್ವ ಹಿಂದು ಪರಿಷತ್ತಿಗೆ ಸೇರಿದ ಕೊಣಾಜೆ ಬಳಿಯ ಪಜೀರು ಗೋವನಿತಾಶ್ರಮಕ್ಕೆ ಸೇರಿಸಿದ್ದರೆನ್ನಲಾಗಿದೆ.

ಆದರೆ ಆಶ್ರಮದಲ್ಲೂ ಶೌಕತ್ ನೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದ ಮಹಿಳೆ, ನಾಲ್ಕು ದಿವಸಗಳ ಹಿಂದೆ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಶೌಕತ್ ನೊಂದಿಗೆ ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಹಿಂದೂ ಸಂಘಟನೆಯ ಕಾರ್ಯಕರ್ತರು ಮಹಿಳೆಯನ್ನು ಹುಡುಕುವಾಗ ನಿನ್ನೆ ಆಕೆ ಉಳ್ಳಾಲದಲ್ಲಿ ಶೌಕತ್ ಜೊತೆ ಬುರ್ಖಾಧಾರಿಯಾಗಿ ಪತ್ತೆಯಾಗಿದ್ದರು. ಹಾಗೆಯೆ ತನ್ನ ಹೆಸರನ್ನು ಆಯಿಷಾ ಎಂದು ಬದಲಿಸಿಕೊಂಡಿದ್ದಳು ಎಂದು ತಿಳಿದುಬಂದಿದೆ. ಈ ಕುರಿತು ಕೊಣಾಜೆ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ.

ಅಡ್ಯಾರ್ ಮೂಲದವನೇ ಆಗಿರುವ ಶೌಕತ್ ಕೂಡ ವಿವಾಹಿತನಾಗಿದ್ದು, ಆತನ ಹಿರಿಮಗಳಿಗೆ ಮುಂದಿನ ವಾರ ಮದುವೆ ನಿಗದಿಯಾಗಿದೆ. ಈ ನಡುವೆಯೇ ಶೌಕತ್, ತನ್ನ ಕುಟುಂಬವನ್ನು ತೊರೆದಿದ್ದಾನೆ ಎನ್ನಲಾಗುತ್ತಿದೆ. ಬೇರೆ ಯುವತಿಯರ ಜೊತೆಗೂ ಆತ ಅಕ್ರಮ ಸಂಬಂಧಗಳನ್ನು ಇರಿಸಿದ್ದಾನೆಂದು ತಿಳಿದು ಬಂದಿದೆ.

ಆದರೆ, ಹಿಂದು ಮಹಿಳೆ ಪೊಲೀಸರಲ್ಲಿ ಶೌಕತ್ ಜೊತೆಯೇ ತೆರಳುವುದಾಗಿ ಪಟ್ಟು ಹಿಡಿದಿದ್ದಾಳೆ. ಬಜರಂಗದಳದ ಕಾರ್ಯಕರ್ತರು ಠಾಣೆಯಲ್ಲಿದ್ದು ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ್ದಾರೆ. ಮಧ್ಯ ವಯಸ್ಕ ವ್ಯಕ್ತಿಯೇ ಮಹಿಳೆಯನ್ನು ಪುಸಲಾಯಿಸಿ ಮತಾಂತರಿಸಲು ಯತ್ನಿಸಿದ್ದಾನೆಂದು ದೂರಿದ್ದಾರೆ.

- Advertisement -
spot_img

Latest News

error: Content is protected !!