Tuesday, May 14, 2024
HomeUncategorized2 ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯನ್ನು ಪತ್ತೆ ಹಚ್ಚಿದ ಕನ್ನಡಿ

2 ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯನ್ನು ಪತ್ತೆ ಹಚ್ಚಿದ ಕನ್ನಡಿ

spot_img
- Advertisement -
- Advertisement -


ಹೈದರಾಬಾದ್: ಕನ್ನಡಿಯಿಂದ ನಮಗೆ ಏನ್ ಉಪಯೋಗ ಅಂತಾ ಕೇಳಿದ್ರೆ ಎಲ್ಲರೂ ಥಟ್ ಅಂತಾ ಹೇಳೋದು ಮುಖ ನೋಡೋಕೆ ಅಂತಾ.ಆದ್ರೆ ಇದೇ ಕನ್ನಡಿ ಬಾಲಕಿಯೊಬ್ಬಳ ಪತ್ತೆಗೆ ಸಹಾಯ ಮಾಡಿದೆ ಅಂದ್ರೆ ನಂಬ್ತೀರಾ..ಆದ್ರೆ ನಂಬ್ಲೇ ಬೇಕು..

ಯೆಸ್… 2 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯ ಮುಖವನ್ನು ಪತ್ತೆ ಮಾಡಿ ತೋರಿಸಿದೆ!
ಏಳು ವರ್ಷದ ಬಾಲಕಿ 2017ರ ಜನವರಿಯಲ್ಲಿ ಹೈದರಾಬಾದ್ನಲ್ಲಿ ಕಾಣೆಯಾಗಿದ್ದಳು. ಆದರೆ ಇದೀಗ ಆಕೆ ಮಧ್ಯಪ್ರದೇಶದಲ್ಲಿ ಪತ್ತೆಯಾಗಿದ್ದು, ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ. ಇದನ್ನು ಸಾಧ್ಯವಾಗಿಸಿದ್ದು, ‘ದರ್ಪಣ’.

ಕಾಣೆಯಾದವರನ್ನು ಪತ್ತೆ ಮಾಡಲೆಂದೇ ತೆಲಂಗಾಣ ಪೊಲೀಸರು ಫೇಸ್ ರೆಕಗ್ನಿಷನ್ ಟೆಕ್ನಾಲಜಿ ಅಳವಡಿಸಿರುವ ವ್ಯವಸ್ಥೆಯೊಂದನ್ನು ರೂಪಿಸಿದ್ದು, ಅದಕ್ಕೆ ‘ದರ್ಪಣ’ ಎಂದು ಹೆಸರಿಟ್ಟಿದ್ದಾರೆ. ಕಾಣೆಯಾದವರ ಫೋಟೋಗಳನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಬಾಲಕಿ ಮಧ್ಯಪ್ರದೇಶದ ಬೇಟುಲ್ ಜಿಲ್ಲೆಯಲ್ಲಿರುವುದನ್ನು ತೆಲಂಗಾಣ ಸಿಐಡಿ ಪೊಲೀಸರು ಕಂಡುಕೊಂಡಿದ್ದಾರೆ.

ಹೀಗೆ ನಾಪತ್ತೆಯಾದವರು ದರ್ಪಣದ ಮೂಲಕ ಮತ್ತೆ ಮನೆಯವರನ್ನು ಸೇರುತ್ತಿರುವ ಪ್ರಕರಣದಲ್ಲಿ ಇದು 18ನೆಯದ್ದು. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂಬುದಾಗಿ ಸಿಐಡಿ ಪೊಲೀಸ್ ಅಧಿಕಾರಿ ಗೋವಿಂದ್ ಸಿಂಗ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!