Thursday, May 9, 2024
Homeಜ್ಯೋತಿಷ್ಯಶನಿವಾರದ ರಾಶಿ ಭವಿಷ್ಯ: ಇಂದು ಶನಿಯ ಅನುಗ್ರಹ ಯಾರಿಗಿದೆ?

ಶನಿವಾರದ ರಾಶಿ ಭವಿಷ್ಯ: ಇಂದು ಶನಿಯ ಅನುಗ್ರಹ ಯಾರಿಗಿದೆ?

spot_img
- Advertisement -
- Advertisement -

ಮೇಷ: ವಿವೇಚನೆ ಇಲ್ಲದೆ ಮೇಲಾಧಿಕಾರಿ ಹತ್ತಿರ ಮಾತನಾಡಬೇಡಿ. ನೀವು ಖಾಸಗಿ ಕಂಪನಿ ನೌಕರರಾಗಿದ್ದಲ್ಲಿ ಹೆಚ್ಚಿನ ವೇತನ ಸಿಗುವುದು. ಗುಂಪುಗಾರಿಕೆ ಮಾಡಲು ಹೋಗಬೇಡಿ ಇದರಿಂದ ದೊಡ್ಡ ಅನಾಹುತ ಸಂಭವ. ಪಾಲುದಾರಿಕೆ ವ್ಯವಹಾರದಲ್ಲಿ ನೀವು ಆರ್ಥಿಕ ನಷ್ಟ ಸಂಭವ. ರಿಯಲ್ ಎಸ್ಟೇಟ್ ಮೂಲಗಳಿಂದ ಧನಾಗಮನವಾಗಲಿದೆ.

ವೃಷಭ:ಬಿಡುವಿಲ್ಲದ ಕೆಲಸದಿಂದಾಗಿ ಎದೆ ನೋವು ಕಾಡುವ ಸಾಧ್ಯತೆ ಇರುತ್ತದೆ. ಸಂಗಾತಿಯ ಹಿತನುಡಿಗಳನ್ನು ಆಲಿಸುವುದು ಒಳ್ಳೆಯದು. ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಕೊರತೆ. ನಿರೀಕ್ಷಿತ ಶುಭ ಮಂಗಳ ಸಮಾಚಾರ ಕೇಳಿಬರಲಿದೆ.

ಮಿಥುನ: ಅಕ್ಕಪಕ್ಕದವರ ಮನೆಯಿಂದ ವೈರತ್ವ. ವಿರೋಧಿಗಳಿಂದ ನಿಂದೆಯ ಮಾತುಗಳು ಕೇಳಿಬರುವ ಸಾಧ್ಯತೆ. ಸಂಗಾತಿಯನ್ನು ಪ್ರೀತಿ-ವಿಶ್ವಾಸದಿಂದ ವ್ಯವಹರಿಸಿರಿ. ಹಳೆಯ ಕಹಿ ಘಟನೆಗಳಿಂದ ವೇದನೆ. ಶುಭ ಕಾರ್ಯಗಳಲ್ಲಿ ಅವಸರ ಬೇಡ.

ಕಟಕ: ರಾಜಕೀಯ ಧುರೀಣರಿಗೆ ಹೈಕಮಾಂಡ್ ರಿಂದ ಭರವಸೆ. ಸಹೋದ್ಯೋಗಿಗಳಿಂದ ತೀವ್ರ ಒತ್ತಡದ ಸನ್ನಿವೇಶ. ಎದೆಯ ಎಡಭಾಗದಲ್ಲಿ ಆರೋಗ್ಯದ ಬಗ್ಗೆ ಉದಾಸೀನ ಬೇಡ. ಹಿತೈಷಿಗಳ ವಿಷಯದಲ್ಲಿ ಎಚ್ಚರಿದಿಂದಿರಿ. ಬಹುದಿನದ ಬಾಕಿ ಹಣ ಮರು ಪಾವತಿಯಾಗಲಿದೆ.

ಸಿಂಹ: ಕುಟುಂಬದ ಸದಸ್ಯರಿಗೆ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿರಿ. ದಾಖಲೆ ಪತ್ರ ಮರಳಿ ಸಿಗಲು ವಿಳಂಬ ಸಾಧ್ಯತೆ. ವಿದೇಶ ಪ್ರಯಾಣಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ. ಸಂಗಾತಿಯೊಂದಿಗೆ ಪರಮಾಪ್ತತೆ ಹೊಂದುವಿರಿ. ಶಿಕ್ಷಕವೃಂದವರಿಗೆ ಉತ್ತಮ ಮಾರ್ಗದರ್ಶನ ಲಭಿಸುವುದು

ಕನ್ಯಾ: ನಿಮ್ಮ ಮನಸ್ಸು ಸ್ವಚ್ಛವಾಗಿಟ್ಟುಕೊಳ್ಳಿರಿ, ಏಕೆಂದರೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಮತ್ತು ನಂಬಿಕೆ ಹೊಂದಿರುತ್ತಾರೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇರುವುದು. ಪತ್ನಿ ಜೊತೆ ಮುಖಸ್ತುತಿ. ನಿಮ್ಮನ್ನು ವಿರೋಧಿ ಮಾಡುವವರನ್ನು ಆದಷ್ಟು ದೂರ ಇಡುವುದು ಒಳ್ಳೆಯದು.

ತುಲಾ: ಪರರ ಕೆಲಸ ನಿಮಿತ್ತವಾಗಿ ನಿಮ್ಮ ಅಮೂಲ್ಯವಾದ ವಸ್ತು ಕಳೆದುಕೊಳ್ಳುವಿರಿ. ಹೊಸ ಯೋಜನೆಗಳಿಗೆ ಮಾತುಕತೆ ನಡೆಸಲು ಅಡ್ಡಿಯಿಲ್ಲ. ಸವಿ ಮಾತುಗಳಿಂದ ಮಾತ್ರ ಸಂಗಾತಿಯ ಮನಸ್ಸು ಗೆಲ್ಲುವಿರಿ. ಬೇರೆಯವರು ನಿಮಗೆ ಹಣದ ಸಹಾಯ ಮಾಡಬಹುದು. ಮನೆಯಲ್ಲಿ ಆರೋಗ್ಯಕರ ವಾತಾವರಣ ನೆಮ್ಮದಿ ತರಲಿದೆ.

ವೃಶ್ಚಿಕ: ಉದ್ಯೋಗ ಜೀವನದಲ್ಲಿ ಬೇಸರ. ಮೇಲಾಧಿಕಾರಿ ಯಿಂದ ಕಿರುಕುಳ. ಸಹೋದ್ಯೋಗಿಗಳಿಂದ ಮನಸ್ತಾಪ. ಅತಿಯಾದ ಹೆಚ್ಚಿನ ಕೆಲಸದ ಒತ್ತಡ. ಕೆಲವೊಮ್ಮೆ ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೊಂದು ಕಂಪನಿಗೆ ಸೇರುವ ಬಯಕೆ.

ಧನುಸ್ಸು: ವ್ಯಾಪಾರದಲ್ಲಿ ನಷ್ಟ. ಮನಸ್ಸಿನಲ್ಲಿ ನೆಮ್ಮದಿಯ ಕೊರತೆ.ಆರ್ಥಿಕ ಉನ್ನತಿಗಾಗಿ ಮಹಾಲಕ್ಷ್ಮೀಯನ್ನು ಪೂಜಿಸಿರಿ. ಬಂಧುಗಳ ವೈಯಕ್ತಿಕ ವ್ಯವಹಾರದಲ್ಲಿ ಪ್ರವೇಶ ಬೇಡ. ನೀವೇ ಅಪಮಾನಕ್ಕೆ ಈಡಾಗುವಿರಿ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಉನ್ನತ ಶಿಕ್ಷಣಕ್ಕಾಗಿ ದೂರದ ಪ್ರಯಾಣ.

ಮಕರ: ಉನ್ನತ ವಿದ್ಯಾಭ್ಯಾಸ ಮುಂದುವರಿಕೆಗೆ ವಿದೇಶಕ್ಕೆ ಹೋಗುವ ಅವಕಾಶ. ಹಣಕಾಸಿನ ವ್ಯವಸ್ಥೆ ತೊಂದರೆ ಕಾಡಲಿದೆ. ಸಂಗಾತಿಗೆ ಭೇಟಿ ಮಾಡಿ ಶಾಂತಿ ಮಾಡಬೇಕಾಗುವುದು. ವಿದ್ಯುತ್ ಉಪಕರಣಗಳಿಂದ ತೊಂದರೆ ಸಂಭವ. ನಿವೇಶನ ಖರೀದಿಯಿಂದ ವಿಪರೀತ ಖರ್ಚು ಕಂಡುಬರುವುದು.

ಕುಂಭ: ದಕ್ಷತೆಯಿಂದ ಕಾರ್ಯ ನಿರ್ವಹಿಸುವಿರಿ, ಮೇಲಾಧಿಕಾರಿ ಇಂದ ಪ್ರಶಂಸೆ ಸಿಗಲಿದೆ. ಪತ್ನಿಯ ಉದರ ಸಂಬಂಧಿ ಸಮಸ್ಯೆ ಸಾಧ್ಯತೆ. ಸಾಲಕ್ಕೆ ಸಂಬಂಧಪಟ್ಟ ಆಹಾರ ಜಾಣತನದಿಂದ ನಿಭಾಯಿಸುವಿರಿ. ಅತಿ ಮುಂಗೋಪ ದ್ವೇಷಕ್ಕೆ ಕಾರಣವಾಗುವುದು.

ಮೀನ: ನೀವು ಅತೀ ಮುಖ್ಯವಾದ ಕೆಲಸಗಳು ವಿಳಂಬ ಸಾಧ್ಯತೆ. ನಿಮ್ಮ ಕುಟುಂಬ ಸದಸ್ಯರ ಮದುವೆ ಕಾರ್ಯ ಕಡೆ ಗಮನ ಕೊಡುವುದು ಒಳ್ಳೆಯದು. ಸಂಗಾತಿಯ ಮಾತು ಮನಸ್ಸಿಗೆ ಆನಂದ ತರಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ವಿಳಂಬ.

- Advertisement -
spot_img

Latest News

error: Content is protected !!