Friday, June 5, 2026
Homeಪ್ರಮುಖ-ಸುದ್ದಿಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಸ್ಮಯ, ನಾಗರ ಪಂಚಮಿಯಂದೇ ಜೀವಂತ ನಾಗನ ದರ್ಶನ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಸ್ಮಯ, ನಾಗರ ಪಂಚಮಿಯಂದೇ ಜೀವಂತ ನಾಗನ ದರ್ಶನ

- Advertisement -
- Advertisement -

ಸುಬ್ರಹ್ಮಣ್ಯ : ಇಂದು ನಾಡಿನಾದ್ಯಂತ ಕೊರೊನಾ ಆತಂಕದ ನಡುವೆಯೇ ಭಕ್ತರು ಆಚರಣೆ ಮಾಡಿದರು. ಆದರೆ ನಾಗರಪಂಚಮಿಯ ದಿನ ತುಳುನಾಡಿನ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ವಿಸ್ಮಯವೊಂದು ನಡೆದಿದೆ. ನಾಗರಪಂಚಮಿಯ ದಿನವೇ ದೇಗುಲದಲ್ಲಿ ಹಾವು ಕಾಣಿಸಿಕೊಳ್ಳುವ ಮೂಲಕ ಭಕ್ತರ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

ಇಂದು ನಾಗರ ಪಂಚಮಿ ಪೂಜೆಯ ವೇಳೆ  ಮೊದಲಿಗೆ ದೇಗುಲದ ನಾಗ ಪ್ರತಿಷ್ಟೆ ಮಂಟಪದ ಬಳಿ ನಾಗರ ಹಾವೊಂದು ಹರಿದುಕೊಂಡು ಹೋಗಿದೆ.ಅರ್ಚಕರು ನಾಗಮಂಟಪದಲ್ಲಿ ಪೂಜೆ ನಡೆಸುತ್ತಿದ್ದ ವೇಳೆ ದೇವಸ್ಥಾನದ ಹೊರಾಂಗಣದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಈ ಅದ್ಭುತ ದೃಶ್ಯವನ್ನು ದೇಗುಲದ ಸಿಬ್ಬಂದಿ ನೋಡಿ ಅಚ್ಚರಿಗೊಂಡರು, ಇನ್ನು ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿದ್ದಾರೆ.

- Advertisement -

Latest News

error: Content is protected !!